ಕಾರವಾರ: ‘ಹವಾಮಾನ ವೈಪರೀತ್ಯ, ಕೋವಿಡ್‌ನಂಥ ಕಾರಣಗಳಿಂದ ಮೀನುಗಾರರು ಸಮಸ್ಯೆಗೀಡಾಗಿದ್ದಾರೆ. ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಉಂಟಾಗುತ್ತದೆ’ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಮಾಂಗ್ರೆ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಕ್ಷೇತ್ರವಾರು ಜನಪ್ರತಿನಿಧಿಗಳು ಆಯಾ ತಾಲ್ಲೂಕಿನ ಮೀನುಗಾರ ಸಂಘಟನೆಗಳ ನಾಯಕರನ್ನು ಕರೆದು ಚರ್ಚಿಸಬೇಕು. ಸರ್ಕಾರದಿಂದ ಸಿಗುವ ಯೋಜನೆಗಳು ಹಾಗೂ ಸವಲತ್ತುಗಳನ್ನು ಕೊಡಿಸಬೇಕು’ ಎಂದು ಒತ್ತಾಯಿಸಿದರು.

‘ಮೂರ್ನಾಲ್ಕು ವರ್ಷಗಳಲ್ಲಿ ಉತ್ತರ ಕನ್ನಡದ ಕರಾವಳಿಗೆ ಏಳೆಂಟು ಚಂಡಮಾರುತಗಳು ಅಪ್ಪಳಿಸಿವೆ. ಈ ವರ್ಷ ಮೀನುಗಾರಿಕೆ ಒಳ್ಳೆಯ ರೀತಿಯಲ್ಲಿ ಆಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಆಕಸ್ಮಿಕ ಮಳೆ, ಗಾಳಿ ಹಾಗೂ ಚಂಡಮಾರುತದಿಂದ ತಿಂಗಳುಗಟ್ಟಲೆ ಕೈಕಟ್ಟಿ ಕೂರುವಂಥ ಸ್ಥಿತಿಯಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಜಿಲ್ಲೆಯ ಹಲವು ಬಂದರುಗಳಲ್ಲಿ ದೋಣಿಗಳಿಗೆ ಹಾನಿಯಾಗಿದೆ’ ಎಂದರು.

‘ಬಂದರುಗಳಲ್ಲಿ ಹಲವು ವರ್ಷಗಳಿಂದ ಹೂಳನ್ನು ತೆಗೆದಿಲ್ಲ. ದೋಣಿಗಳಿಗೆ ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದರೂ ಮೀನುಗಾರರಿಗೆ ಪರಿಹಾರ ಸಿಕ್ಕಿಲ್ಲ. ಈ ಎಲ್ಲ ಪರಿಸ್ಥಿತಿಗಳಿಂದ ಆದಾಯವಿಲ್ಲದೇ ಮೀನುಗಾರರ ಸ್ಥಿತಿ ಅತಂತ್ರವಾಗಿದೆ. ಸಾಲ ನೀಡಿದ ಬ್ಯಾಂಕ್‌ಗಳು ಆಸ್ತಿಯನ್ನು ಜಪ್ತಿ ಮಾಡುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಿರ್ಣಯಕ್ಕೆ ಬರಲಿ’:

‘ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣದ ಬಗ್ಗೆ ಸ್ಥಳೀಯ ಮೀನುಗಾರರೇ ಚರ್ಚಿಸಿ ಒಮ್ಮತದ ನಿರ್ಣಯಕ್ಕೆ ಬರಲಿ. ಮುಂದೆ ಅಗತ್ಯವಿದ್ದರೆ ಜಿಲ್ಲೆಯ ಮೀನುಗಾರ ನಾಯಕರು ಮಧ್ಯ ಪ್ರವೇಶಿಸುತ್ತಾರೆ’ ಎಂದು ಗಣಪತಿ ಮಾಂಗ್ರೆ ಹೇಳಿದರು.

ನಗರಸಭೆ ಸದಸ್ಯ ರಾಜೇಶ ಮಾಜಾಳಿಕರ್, ಮುಖಂಡರಾದ ವಾಮನ ಹರಿಕಂತ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.