ಕಾರವಾರ: ತಾಲ್ಲೂಕಿನ ಗೊಟೆಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಬಾರಗದ್ದಾಗ್ರಾಮವು ಮೂಲ ಸೌಕರ್ಯಗಳಿಲ್ಲದೇ ಸೊರಗಿದೆ. ಜನರು ಈ ಭಾಗದಲ್ಲಿ ವಾಸಿಸಲು ಶುರು ಮಾಡಿಏಳೆಂಟು ದಶಕಗಳಾದರೂ ಸಮರ್ಪಕವಾದ ರಸ್ತೆಯ ಕೊರತೆ ಎದುರಿಸುತ್ತಿದ್ದಾರೆ.

ಗೋಯಾರ್, ಬಾರಗದ್ದಾಗ್ರಾಮಗಳು ನಗರದಿಂದ 35 ಕಿಲೋಮೀಟರ್ ದೂರದಲ್ಲಿವೆ. ದುರ್ಗಮವಾದ ಕಾಡಿನ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಮನೆಗಳಿವೆ. ಸುಮಾರು 70 ವರ್ಷಗಳಿಂದ ಇಲ್ಲಿ ಜನರು ವಾಸವಿದ್ದಾರೆ.

‘ಮಳೆಗಾಲದಲ್ಲಿ ರಸ್ತೆಯು ಕೆಸರುಗದ್ದೆಯಂತಾಗಿ ವಾಹನ ಸಂಚಾರ ತೀರಾ ಕಷ್ಟವಾಗುತ್ತದೆ. ಶಾಲಾ ಮಕ್ಕಳು ಸಮವಸ್ತ್ರವನ್ನು ಕೆಸರು ಮಾಡಿಕೊಂಡೇ ಸಾಗಬೇಕು. ಪ್ರತಿ ವರ್ಷವೂರಸ್ತೆಗೆಮಣ್ಣು ಹಾಕುತ್ತಾರೆ. ಅದರ ಬದಲಾಗಿಅನುದಾನವನ್ನು ಕಾಂಕ್ರೀಟ್ ರಸ್ತೆಗೆ ವಿನಿಯೋಗಿಸಿದರೆ ಉತ್ತಮವಾಗುತ್ತಿತ್ತು. ಬಾರಗದ್ದಾದಿಂದ ಗೋಯಾರ್ ತನಕ ಎಂಟು ಕಿಲೋಮೀಟರ್ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಿಕೊಡಬೇಕು’ ಎಂಬುದು ಗ್ರಾಮಸ್ಥ ಗಜಾನನ ಅವರ ಒತ್ತಾಯವಾಗಿದೆ.

ಕುಡಿಯುವ ನೀರಿನ ಸಮಸ್ಯೆ: ‘ಬಾರಗದ್ದಾಗ್ರಾಮದಲ್ಲಿ ಕೆಲವು ವರ್ಷದ ಹಿಂದೆ ಜಲನಿರ್ಮಲ ಯೋಜನೆಯಡಿಯಲ್ಲಿ ಝರಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕಾಡಿನಲ್ಲಿಒಂದು ಕಿಲೋಮೀಟರ್ ದೂರದಲ್ಲಿರುವ ಕೆರೆಯ ನೀರನ್ನು ಪೈಪ್‌ಲೈನ್ ಮೂಲಕ ಜನರಿಗೆ ಒದಗಿಸಲಾಗುತ್ತದೆ. ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವುದರಿಂದ ಒಂದುಕೊಳವೆಬಾವಿಕೊರೆಯಲಾಗಿತ್ತು.ಮೂರು ವರ್ಷದ ಹಿಂದೆ ಅದೂ ಹಾಳಾಗಿದ್ದು, ದುರಸ್ತಿಯಾಗಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಮಹಾಬಲೇಶ್ವರ ಬಡ್ಡೇಕರ್.

ಈ ಬಗ್ಗೆ ಪ್ರತಿಕ್ರಿಯಿಸಿದ ಗೋಟೆಗಾಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಧುರಾ ನಾಯ್ಕ, ‘ಝರಿ ನೀರಿನ ಟ್ಯಾಂಕ್ ಮತ್ತು ಪೈಪ್‌ಲೈನ್ ನಿರ್ಮಾಣಕ್ಕೆ ₹ 1.50 ಲಕ್ಷ ಹಾಗೂಬಾರಗದ್ದಾದಲ್ಲಿ ಹೊಸ ಪೈಪ್‌ಲೈನ್ ಅಳವಡಿಕೆಗೆ₹ 83 ಸಾವಿರಬಿಡುಗಡೆಯಾಗಿದೆ. ಈ ಎಲ್ಲ ಕಾಮಗಾರಿಗಳಿಗೂ ಊರಿನ ಜನರ ಸಹಕಾರ ಅಗತ್ಯ’ ಎಂದರು.

ರೋಗಿ ಸಾಗಿಸಲು ಕಂಬಳಿ!:ಮಳೆಗಾಲದಲ್ಲಿ ಗೋಯಾರ್ ರಸ್ತೆಯು ಸಂಪೂರ್ಣವಾಗಿ ಹಾಳಾಗಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಆಂಬುಲೆನ್ಸ್, ಆಟೊರಿಕ್ಷಾಗಳು ಕೂಡ ಇಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ. ಯಾರಿಗಾದರೂ ಅನಾರೋಗ್ಯ ಕಾಡಿದರೆ ಕಂಬಳಿಯಲ್ಲಿಹೊತ್ತುಕೊಂಡೇಐದಾರು ಕಿಲೋಮೀಟರ್ಬರಬೇಕಾದ ಅನಿವಾರ್ಯತೆ ಇದೆ. ಶಾಶ್ವತ ರಸ್ತೆ ಕಾಮಗಾರಿಯ ಅವಶ್ಯಕತೆಯಿದೆಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.