ಕಾರವಾರ: ಸಾಗರಮಾಲಾಯೋಜನೆಯಡಿ ನಡೆಸಲಾಗುತ್ತಿರುವ ಅಲೆ ತಡೆಗೋಡೆ ಕಾಮಗಾರಿಯನ್ನು ಪುನರ್ಪರಿಶೀಲಿಸಲು ಸಚಿವರಿಗೆ ಮನವಿ ಮಾಡಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ’ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಕಾಮಗಾರಿಯನ್ನು ವಿರೋಧಿಸಿ ಮೀನುಗಾರರು ಗುರುವಾರ ಕರೆ ನೀಡಿದ್ದ ಕಾರವಾರ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆಯ ಸಂದರ್ಭ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮೀನುಗಾರಿಕಾ ಮತ್ತು ಬಂದರು ಇಲಾಖೆ ಸಚಿವರು ಬೆಂಗಳೂರಿನಲ್ಲಿ ಸ್ಥಳೀಯ ಮೀನುಗಾರರಮುಖಂಡರು ಮತ್ತು ತಜ್ಞರೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

‘ವಿವಿಧ ಯೋಜನೆಗಳಿಂದ ಕಡಲತೀರ ಕೈತಪ್ಪಿ ಹೋಗುತ್ತದೆ ಎಂಬುದು ಸ್ಥಳೀಯರ ಆತಂಕವಾಗಿದೆ. ಈ ಬಗ್ಗೆ ಸಚಿವರು ಮತ್ತಷ್ಟು ಚರ್ಚಿಸಿ ತೀರ್ಮಾನಕ್ಕೆ ಬರಲಿದ್ದಾರೆ. ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು’ಎಂದು ಪ್ರಕಟಿಸಿದರು.

ಇನ್ನಷ್ಟು...

ಬಿಕೋ ಎನ್ನುತ್ತಿರುವ ಕಾರವಾರ ಬಸ್ ನಿಲ್ದಾಣ

ಪ್ರತಿಭಟನಾ ಮೆರವಣಿಗೆ

ಪ್ರತಿಭಟನಾ ಸಭೆ

ಪ್ರತಿಭಟನಾ ಮೆರವಣಿಗೆ

ಪ್ರತಿಭಟನಾ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.