ಕಾರವಾರ: ‘ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರ ಕಾಮಗಾರಿಯನ್ನು ಸಂಪೂರ್ಣ ಪರಿಶೀಲನೆ ನಡೆಸಿ ಮುಂದಿನ ಹತ್ತು ದಿನಗಳೊಳಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎನ್.ಎಚ್.ಎ.ಐ ಅಧಿಕಾರಿಗಳನ್ನು ತರಾಟೆಗೆ ಪಡೆದರು.

‘ಹೆದ್ದಾರಿಯ 187 ಕಿ.ಮೀ ಪೈಕಿ 179 ಕಿ.ಮೀ ಕಾಮಗಾರಿ ಮುಗಿದಿದೆ. ಐದು ಕಿ.ಮೀ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗ ಬಾಕಿ ಇದೆ. ಇದರಿಂದ ವಿಳಂಬವಾಗಿದೆ’ ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕ ಶಿವಕುಮಾರ್ ತಿಳಿಸಿದರು.

‘ವಾಸ್ತವ ಅಂಶ ತಿಳಿಯದೆ ಸಭೆಯಲ್ಲಿ ಮಾಹಿತಿ ನೀಡುತ್ತಿದ್ದೀರಿ. ಕಾಮಗಾರಿ ಆರಂಭಿಸಿ 10 ವರ್ಷ ಕಳೆದರೂ ಕೆಲಸ ಸರಿಯಾಗಿ ಮುಗಿಸಿಲ್ಲ. ಮಾಜಾಳಿಯಿಂದ ಭಟ್ಕಳ ಶಿರೂರುವರೆಗೆ ಸಂಚರಿಸಿ ಕಾಮಗಾರಿ ಎಲ್ಲೆಲ್ಲಿ ಬಾಕಿ ಇದೆ. ಎಲ್ಲಿ ದುರಸ್ತಿ ಅಗತ್ಯವಿದೆ ಎಂಬುದನ್ನೆಲ್ಲ ಪಟ್ಟಿ ಮಾಡಿ ತಿಳಿಸಿ’ ಎಂದು ಸಚಿವರು ಸೂಚಿಸಿದರು.

‘ಸೂಚನಾ ಫಲಕಗಳು, ಸಿಸಿಟಿವಿ ಸೇರಿದಂತೆ ಸುರಕ್ಷತೆಯ ಕ್ರಮಗಳನ್ನು ಅನುಸರಿಸಿಲ್ಲ. ಹಲವೆಡೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ದೂರಿದರು.

‘ಶಿರಸಿ-ಹಾವೇರಿ ಮತ್ತು ಶಿರಸಿ–ಕುಮಟಾ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಲಸಕ್ಕೆ ವೇಗ ನೀಡಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.

‘ಎಂಡೊಸಲ್ಫಾನ್ ಬಾಧಿತರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಬೇಕು. ಬಾಧಿತ ಮಕ್ಕಳಿಗೆ ಮಂಕಿಯಲ್ಲಿ ವಸತಿ ನಿಲಯ ಸ್ಥಾಪನೆ ಕೆಲಸ ತ್ವರಿತವಾಗಬೇಕು. ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಔಷಧ ಕೊಡಬೇಕು. ಔಷಧ ದಾಸ್ತಾನು ಇರದಿದ್ದರೆ ತಂದು ಕೊಡಬೇಕು. ಖಾಸಗಿ ಅಂಗಡಿಗೆ ಚೀಟಿ ಬರೆಯಬಾರದು’ ಎಂದು ಎಚ್ಚರಿಸಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮೂರು ತಿಂಗಳು ಕಳೆದರೂ ಸೋಪ್ ಕಿಟ್ ನೀಡದ್ದಕ್ಕೆ ಜಿಲ್ಲಾ ಅಧಿಕಾರಿ ಸರೋಜಾ ಹಳಕಟ್ಟಿ ಅವರನ್ನು ತರಾಟೆಗೆ ಪಡೆದರು. ವಿದ್ಯಾರ್ಥಿಗಳಿಗೆ ತಕ್ಷಣ ಕಿಟ್ ಒದಗಿಸಬೇಕು. ವಿಳಂಬ ಆಗಿದ್ದರೂ ಸಮಸ್ಯೆ ಗಮನಕ್ಕೆ ತಂದಿಲ್ಲ ಎಂದು ಹರಿಹಾಯ್ದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಇದ್ದರು.

ಹೆದ್ದಾರಿ ಕಾಮಗಾರಿ ಬೇಗ ಮುಗಿಸಲು ಸೂಚನೆ ವಿದ್ಯಾರ್ಥಿಗಳಿಗೆ ಸೋಪ್ ಕಿಟ್ ವಿತರಿಸಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ಸೂಚನೆ

ವೈದ್ಯರ ವರ್ತನೆ ವಿರುದ್ಧ ಅಸಮಾಧಾನ

‘ಶಿರಸಿಯ ಯುವಕನೊಬ್ಬ ಅನಾರೋಗ್ಯದಿಂದ ಪೀಡಿತನಾಗಿ ಕಾರವಾರ ಆಸ್ಪತ್ರೆಗೆ ಕರೆತಂದರೆ ವೈದ್ಯರು ಸ್ಪಂದಿಸಿಲ್ಲ. ವೈದ್ಯರ ಬೇಜವಾಬ್ದಾರಿತನದಿಂದ ಯುವಕ ಮೃತಪಟ್ಟಿದ್ದಾನೆ. ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯೂ ಅವ್ಯವಸ್ಥೆಯ ಗೂಡಾಗಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ‘ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ ಅವರನ್ನು ವರ್ಗಾಯಿಸಬೇಕು’ ಎಂದರು. ‘ಯುವಕನ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಬಗ್ಗೆ ತನಿಖೆ ನಡೆಸಿ ವರದಿ ಕೊಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು’ ಎಂದು ಸಚಿವ ಮಂಕಾಳ ವೈದ್ಯ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಕೇಂದ್ರ ಸರ್ಕಾರ ಐಆರ್ಬಿ ರಕ್ಷಿಸುತ್ತಿದೆ

‘ಜಿಲ್ಲೆಯಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66 ಕಾಮಗಾರಿ ಅಧ್ವಾನವಾಗಿದ್ದರೂ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಕೇಂದ್ರ ಸರ್ಕಾರ ಈ ಕಂಪನಿಯನ್ನು ರಕ್ಷಿಸುತ್ತಿದೆ ಎಂಬ ಶಂಕೆ ಮೂಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆರೋಪಿಸಿದರು. ‘ಯೋಜನೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತ ಬಂದಿದೆ. ಆದರೂ ಕಂಪನಿ ಬೀದಿದೀಪ ಅಳವಡಿಕೆ ಸುರಕ್ಷತೆಗೆ ಒತ್ತು ನೀಡದೆ ಮನಸ್ಸಿಗೆ ತೋಚಿದಂತೆ ಕೆಲಸ ಮಾಡುತ್ತಿದೆ. ರಸ್ತೆ ಹಾಳಾದರೂ ನಿರ್ವಹಣೆ ಮಾಡುತ್ತಿಲ್ಲ’ ಎಂದು ಕೆಡಿಪಿ ಸಭೆ ಬಳಿಕ ಮಾಧ್ಯಮದವರೊಡನೆ ಮಾತನಾಡುವ ವೇಳೆ ದೂರಿದರು. ‘ಮರಳು ಗಣಿಗಾರಿಕೆ ವಿರುದ್ಧ ಹೊನ್ನಾವರದ ಕೆಲ ಬಿಜೆಪಿ ಮುಖಂಡರು ಚೆನ್ನೈನ ರಾಷ್ಟ್ರೀಯ ಹಸಿರು ಪೀಠಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಮರಳು ಗಣಿಗಾರಿಕೆ ಆರಂಭಿಸಲು ಸಮಸ್ಯೆಯಾಗಿದೆ. ಮುಂದಿನ ಆದೇಶದವರೆಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಪೀಠವು ಆದೇಶಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.