ಶಿರಸಿ: ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಒತ್ತಾಯಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಷಯ ಮುಂದೂಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ರದ್ದು ಮಾಡುವ ದಮ್ಮಿದೆಯೇ? ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು,'ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ–2020 ತಿದ್ದುಪಡಿಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದನ್ನು ವಾಪಸ್ ಪಡೆಯುವ ಜರೂರತ್ತಿದ್ದರೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇಂಥ ಸರ್ಕಾರದಿಂದ ಕೃಷಿ ಕಾಯ್ದೆ ವಾಪಸ್ ಸಾಧ್ಯವಿದೆಯೇ?' ಎಂದು ಪ್ರಶ್ನಿಸಿದರು.

'ಬಿಜೆಪಿ ಅಧಿಕಾರಾವಧಿಯಲ್ಲಿ ಕೃಷಿ ಕಾಯ್ದೆ ಜಾರಿಗೆ ತರುವಾಗ ಸುಗ್ರೀವಾಜ್ಞೆ ಮೂಲಕ ತರಲಾಗುತ್ತದೆ. ಅದೇ ರೀತಿ ಆ ಕಾಯ್ದೆ ವಾಪಸ್ ತೆಗೆಯಲು ಸಿದ್ದರಾಮಯ್ಯ ಅವರಿಗೆ ದಮ್ಮಿದೆಯೇ?' ಎಂದ ಅವರು, 'ಕೃಷಿ ಕಾಯ್ದೆ ಮಾರ್ಪಾಟಾದ ಮೇಲೆ ಭೂಮಿಯ ಮಾರಾಟ ಜೋರಾಗಿದೆ. ಇಂಥ ಸಂದರ್ಭದಲ್ಲಿ ಕಾಯ್ದೆ ವಾಪಸಾತಿಗೆ ಮೀನಮೇಷ ಮಾಡುತ್ತಿರುವುದು ಸರಿಯಲ್ಲ.

ಈ ಕಾಯ್ದೆ ಜಾರಿಗೆ ತಂದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ರೈತ ಸಂಘದ ಜೊತೆ ಸುದೀರ್ಘವಾಗಿ ಚರ್ಚಿಸಿದ್ದರು.

ಆದರೆ ಈಗ ರೈತರ ಜೊತೆ ಚರ್ಚಿಸುತ್ತೇನೆ ಎನ್ನುತ್ತಿದ್ದಾರೆ.

ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಪರ ಮಾತನಾಡುತ್ತಾರೆ ಎನ್ನುವ ಸಿದ್ದರಾಮಯ್ಯನವರು ಕಾಯ್ದೆ ರದ್ದತಿ ವಿಷಯದಲ್ಲಿ ಸೌಮ್ಯ ನಡೆ ನೋಡಿದರೆ ಅವರಿಗೂ ಬಿಜೆಪಿಗೂ ಹೊಂದಾಣಿಕೆ ಇದ್ದಂತಿದೆ. ನೀವು ಕೊಟ್ಟಿರುವ ಭರವಸೆ ಏನು? ಅದರಿಂದ ನೀವು ತೆಗೆದುಕೊಂಡ ಲಾಭವೇನು? ಎಂಬುದನ್ನು ಸಿದ್ದರಾಮಯ್ಯನವರು ಒಮ್ಮೆ ಜ್ಞಾಪಿಸಿಕೊಳ್ಳುವ ಅಗತ್ಯವಿದೆ' ಎಂದರು.

'ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಂಥ ವಿಷಯದಲ್ಲಿ ಪಕ್ಷಗಳು, ಸ್ವಾಮೀಜಿಗಳು ತಲೆ ಹಾಕಬಾರದು. ಗೋ ಹತ್ಯೆ ವಿಷಯದಲ್ಲಿ ಸ್ವಾಮೀಜಿಗಳು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವುದನ್ನು ಬಿಡಬೇಕು ಎಂದರು.

ಸಂಘಟನೆಯ ಪದಾಧಿಕಾರಿಗಳಾದ ಭಕ್ತರಹಳ್ಳಿ ಭೈರೇಗೌಡ, ರಾಘವೇಂದ್ರ ಕಿರವತ್ತಿ, ಜಾಕಿರ್ ಹುಸೇನ್, ನಾಗರಾಜ್ ಭಾಶಿ, ಜಗನ್ನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.