ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ವನ್ಯಜೀವಿ ಉತ್ಪನ್ನ ಮರಳಿಸಿದ್ದು 16 ಜನ

ಅರಣ್ಯ ಇಲಾಖೆಯ ಮನವಿಗೆ ಸಿಗದ ಸ್ಪಂದನೆ
Published 3 ಜುಲೈ 2024, 5:14 IST
Last Updated 3 ಜುಲೈ 2024, 5:14 IST
ಅಕ್ಷರ ಗಾತ್ರ

ಕಾರವಾರ: ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಮರಳಿಸುವಂತೆ ಅರಣ್ಯ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಜಿಲ್ಲೆಯಲ್ಲಿ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ವರ್ಷದ ಆರಂಭದಿಂದ ಮೂರು ತಿಂಗಳ ಅವಧಿಯಲ್ಲಿ ಕೇವಲ 16 ಜನರು ಮಾತ್ರ ಉತ್ಪನ್ನಗಳನ್ನು ಮರಳಿಸಿದ್ದಾರೆ.

ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರಿಂದ ಉಂಟಾಗಿದ್ದ ಆಕ್ಷೇಪ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ವನ್ಯಜೀವಿ ಉತ್ಪನ್ನ ಧರಿಸಿದವರ ವಿರುದ್ಧ ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ ರಾಜ್ಯದ ವಿವಿಧೆಡೆ ದಾಳಿ ನಡೆಸಿ ವನ್ಯಜೀವಿ ಉತ್ಪನ್ನ ಇಟ್ಟುಕೊಂಡವರ ಮೇಲೆ ಪ್ರಕರಣ ದಾಖಲಿಸಿ, ವಸ್ತುಗಳನ್ನು ವಶಕ್ಕೆ ಪಡೆದಿತ್ತು.

ಜನವರಿ ಆರಂಭದಿಂದ ಏಪ್ರಿಲ್ 11ರ ವರೆಗೆ ವನ್ಯಜೀವಿ ಉತ್ಪನ್ನಗಳನ್ನು ಹೊಂದಿದ್ದವರು ಅರಣ್ಯ ಇಲಾಖೆ ಕಚೇರಿಗೆ ಮರಳಿಸುವಂತೆ ಮನವಿಯನ್ನೂ ಮಾಡಿತ್ತು.

ಕಾಳಿ ಹುಲಿ ಸಂರಕ್ಷಿತಾರಣ್ಯವೂ ಸೇರಿದಂತೆ ಐದು ಅರಣ್ಯ ವಿಭಾಗಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಶೇ 80ರಷ್ಟು ಅರಣ್ಯ ಭೂಮಿ ಇದೆ. ಹಿಂದಿನ ಕಾಲದಿಂದಲೂ ವನ್ಯಜೀವಿ ಉತ್ಪನ್ನ ಬಳಕೆ ಜಿಲ್ಲೆಯಲ್ಲಿ ಹೆಚ್ಚಿದೆ ಎಂಬ ಪ್ರತೀತಿ ಇದೆ. ಪಾರಂಪರಿಕ ಔಷಧ ಪದ್ಧತಿ, ಧಾರ್ಮಿಕ ಆಚರಣೆಗಳಿಗೆ ವನ್ಯಜೀವಿ ಉತ್ಪನ್ನ ಬಳಕೆ ಇದ್ದವು. ಆದರೆ, ಅರಣ್ಯ ಇಲಾಖೆ ನೀಡಿದ ಸೂಚನೆಗೆ ಕೇವಲ 16 ಜನರು ಜಿಂಕೆ ಕೊಂಬು, ಕಾಡುಕೋಣದ ಕೊಂಬು ಸೇರಿದಂತೆ 78 ವಿಧಧ ಉತ್ಪನ್ನಗಳನ್ನು ಆಯಾ ವಲಯ ಅರಣ್ಯಾಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ. ಈ ಪೈಕಿ ಶಿರಸಿ ವಲಯ ವ್ಯಾಪ್ತಿಯಲ್ಲೇ ಹೆಚ್ಚು ಉತ್ಪನ್ನಗಳು ಸಲ್ಲಿಕೆಯಾಗಿವೆ.

‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವನ್ಯಜೀವಿ ಉತ್ಪನ್ನ ಬಳಕೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಪ್ರಕರಣ ದಾಖಲಿಸಬಹುದು ಎಂಬ ಭಯಕ್ಕೆ ಕೆಲವರು ಅವಕಾಶ ನೀಡಿದ್ದರೂ ಅರಣ್ಯ ಇಲಾಖೆಗೆ ಉತ್ಪನ್ನಗಳನ್ನು ಮರಳಿಸಿಲ್ಲ. ಕೆಲವೆಡೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದರೂ ಉತ್ಪನ್ನಗಳನ್ನು ಅವಿತಿಡಲಾಗಿದೆ. ಅವುಗಳ ಬಹಿರಂಗ ಬಳಕೆ ಸಂಪೂರ್ಣ ನಿಂತಿದೆ. ಉತ್ಪನ್ನಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದರು.

‘ಜೊಯಿಡಾ, ಯಲ್ಲಾಪುರ, ಶಿರಸಿ ಭಾಗದಲ್ಲಿ ವನ್ಯಜೀವಿ ಉತ್ಪನ್ನಗಳ ಬಳಕೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆದರೆ, ದಾಳಿ ನಡೆಸಿ ವಶಕ್ಕೆ ಪಡೆಯುವುದು ಕಷ್ಟ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT