ಹೂಸ್ಟನ್: ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಈಕ್ವಡೋರ್ ತಂಡವನ್ನು ಮಣಿಸಿದ ಬಲಿಷ್ಠ ಅರ್ಜೇಂಟೀನಾ ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲ 90 ನಿಮಿಷಗಳಲ್ಲಿ ಇತ್ತಂಡಗಳು 1-1 ಗೋಲಿನ ಅಂತರದ ಸಮಬಲ ಸಾಧಿಸಿತ್ತು. ಇದರಿಂದಾಗಿ ಪಂದ್ಯ ವಿಜೇತರನ್ನು ಪೆನಾಲ್ಟ್ ಶೂಟೌಟ್ ಮೂಲಕ ನಿರ್ಧರಿಸಲಾಯಿತು.

ಆದರೆ ಕಾಲ್ಚೆಂಡಿನ ಚಾಂಪಿಯನ್ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೂ ತಿರುಗಿಬಿದ್ದ ಅರ್ಜೇಂಟೀನಾ 4-2ರ ಅಂತರದಲ್ಲಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಮೆಸ್ಸಿಗಿಲ್ಲ ಸ್ಥಾನ...

ಏತನ್ಮಧ್ಯೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಅರ್ಜೇಂಟೀನಾ ಫುಟ್‌ಬಾಲ್ ತಂಡದಿಂದ 37 ವರ್ಷದ ಮೆಸ್ಸಿ ಅವರನ್ನು ಕೈಬಿಡಲಾಗಿದೆ.

ಮೆಸ್ಸಿ ಮುಂದಾಳತ್ವದಲ್ಲಿ ಅರ್ಜೇಟೀನಾ, 2022ರ ಫುಟ್‌ಬಾಲ್ ವಿಶ್ವಕಪ್ ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.