ಗೋಕರ್ಣ: ಒಣ ಕಸ ಸಂಸ್ಕರಣಾ ಘಟಕ ಸ್ಥಾಪಿಸಿ ಜಿಲ್ಲೆಯಲ್ಲಿಯೇ ಮಾದರಿ ಎನಿಸಿದ್ದ ಗೋಕರ್ಣ ಗ್ರಾಮ ಪಂಚಾಯ್ತಿ, ಈಗ ಹಸಿ ಕಸದಿಂದ ಸಾವಯವ ಗೊಬ್ಬರ ಉತ್ಪಾದಿಸಲು ಸಜ್ಜಾಗಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆಹಸಿ ಕಸದ ಸಂಸ್ಕರಣೆಯನ್ನು ಪ್ರಾಯೋಗಿಕವಾಗಿಆರಂಭಿಸಲಾಗಿದೆ.

ಐದು ಪ್ರಕಾರಗಳ ಹಸಿಕಸಗಳನ್ನು ಈ ಘಟಕದಲ್ಲಿ ಬಳಸಬಹುದಾಗಿದೆ. ಅನ್ನ, ತರಕಾರಿ ತ್ಯಾಜ್ಯಗಳು, ಮೊಟ್ಟೆಗಳ ಓಡು, ಆಹಾರಗಳಾದ ಮೀನಿನ ಮತ್ತು ಕೋಳಿ ತ್ಯಾಜ್ಯ ಮುಂತಾದವುಗಳನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ. ಮೊದಲು ಎಲ್ಲ ಹಸಿಕಸಗನ್ನು ಭಾರಿ ಗಾತ್ರದ ಯಂತ್ರವೊಂದರಲ್ಲಿ ಹಾಕಿ ಪುಡಿ ಮಾಡಲಾಗುತ್ತದೆ. ನಂತರ ಪಕ್ಕದ ಇನ್ನೊಂದು ಯಂತ್ರಕ್ಕೆ ಸಾಗಿಸಿ ಈ ಪುಡಿಗಳಿಗೆ ರಾಸಾಯನಿಕಗಳನ್ನು ಬೆರೆಸಿ ದುರ್ವಾಸನೆ ನಿರ್ಮೂಲನೆ ಮಾಡಲಾಗುತ್ತದ.

ಈ ರೀತಿ ಹಾಕಲಾದ ಹಸಿಕಸದ ಶೇ 50ರಷ್ಟು ಕಚ್ಚಾ ಗೊಬ್ಬರ ಉತ್ಪತ್ತಿಯಾಗುತ್ತದೆ. ಇದನ್ನುಕಂಟೇನರ್ಗಳಲ್ಲಿಇಟ್ಟು ಪ್ರತಿ ಎರಡು ದಿನಗಳಿಗೊಮ್ಮೆ ಐದು ಹಂತದಲ್ಲಿ ಸ್ಪ್ರಿಂಕ್ಲರ್ ಮೂಲಕ ಹದವಾಗಿ ನೀರು ಕೊಡಲಾಗುತ್ತದೆ. 10ನೇದಿನ ಪೌಷ್ಟಿಕವಾದ ಸಾವಯವ ಗೊಬ್ಬರ ಲಭ್ಯವಾಗುತ್ತದೆ.

ದೊಡ್ಡದಾದ ಈ ಘಟಕಕ್ಕೆ ಇನ್ನೂ ಹೆಚ್ಚಿನ ಹಸಿಕಸದ ಅಗತ್ಯವಿದೆ. ಸದ್ಯ ಈ ಭಾಗದಲ್ಲಿ ನಿತ್ಯ ಕೇವಲ 700ಕೆ.ಜಿ ಹಸಿಕಸ ದೊರಕುತ್ತಿದೆ. ಅವೆಲ್ಲವುಗಳೂ ಕೆಲವೇ ಕೆಲವು ಹೊಟೆಲ್ ಮತ್ತು ರೆಸ್ಟೋರೆಂಟ್ಗಳತ್ಯಾಜ್ಯಗಳಾಗಿವೆ. ಇಲ್ಲಿರುವ 100ಕ್ಕೂ ಹೆಚ್ಚಿನ ಹೋಟೆಲ್ ಮತ್ತು ಮನೆಗಳಿಂದ ಹಸಿಕಸಗಳನ್ನುಸಾಗಿಸುವ ವ್ಯವಸ್ಥೆ ಆಗಬೇಕು. ಆಗಈ ಘಟಕ ಗರಿಷ್ಠ ಮಟ್ಟದಲ್ಲಿ ಸಾವಯವ ಗೊಬ್ಬರವನ್ನು ನೀಡುವ ಜೊತೆಗೆ ಪರಿಸರ ಸ್ವಚ್ಛತೆಗೂ ಕಾರಣವಾಗಲಿದೆ.

ಉಪವಿಭಾಗಾಧಿಕಾರಿ ಭೇಟಿ:ಹೊಸದಾಗಿ ವರ್ಗಾವಣೆಗೊಂಡು ಶನಿವಾರ ಪ್ರಥಮವಾಗಿ ಗೋಕರ್ಣ ಗ್ರಾಮ ಪಂಚಾಯ್ತಿಗೆ ಭೇಟಿಯಿತ್ತ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್,ಗ್ರಾಮ ಪಂಚಾಯ್ತಿಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೇ ಸೂರಿನಲ್ಲಿ ಎಲ್ಲವೂ ನಿರ್ಮಾಣವಾಗಿರುವುದು, ಗ್ರಾಮ ಪಂಚಾಯ್ತಿಗೆ ಆರ್ಥಿಕವಾಗಿ ಹೊರೆಯಾಗದಂತೆ ಯೋಜನೆ ಕೈಗೊಂಡಿರುವುದನ್ನು ಅವರು ಶ್ಲಾಘಿಸಿದ್ದಾರೆ.

ಎಲ್ಲಾ ಖಾಸಗಿ ಸಹಭಾಗಿತ್ವ:ಇದಕ್ಕಾಗಿ ಪಂಚಾಯ್ತಿಯಿಂದ ಒಂದು ರೂಪಾಯಿಯೂ ವ್ಯಯವಾಗಿಲ್ಲ. ಸಂಪೂರ್ಣ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗಿದೆ. ಅಂಕೋಲಾದ ಓಂ ಎಂಟರ್ಪ್ರೈಸಸ್ ಮತ್ತು ವೈಷ್ಣವಿಸಾಯಿಲ್ ಮಿಲ್ಈ ಸಾಹಸಕ್ಕೆ ಮುಂದಾಗಿವೆ.ಈ ಘಟಕಕ್ಕಾಗಿ ಅಂದಾಜು ₹ 35 ಲಕ್ಷ ರ್ಚು ಮಾಡಿದೆ. ಪಂಚಾಯ್ತಿಗೆ ನೆಲ ಬಾಡಿಗೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.