ಉತ್ತರ ಕನ್ನಡ (ಜೊಯಿಡಾ): ಪಾರ್ಲೇಜಿ ಬಿಸ್ಕಿಟ್ ಬಾಕ್ಸ್ ನಲ್ಲಿ ಗೋವಾ ಲಿಕ್ಕರ್ ಸಾಗಿಸುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಮಾಲು ಸಹಿತ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ರಾಮನಗರದಲ್ಲಿ ಜೊಯಿಡಾ ಸಿಪಿಐ ನಿತ್ಯಾನಂದ ಪಂಡಿತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಗೊವಾದಿಂದ ಹೈದರಾಬಾದ್ ಗೆ ಪಾರ್ಲೇಜಿ ಬಿಸ್ಕಿಟ್ ತುಂಬಿಕೊಂಡು ಹೋಗುತ್ತಿದ್ದ ಅಶೋಕ ಲೈಲೆಂಡ್ ಲಾರಿಯಲ್ಲಿ 150 ಬಾಕ್ಸ್ ಗಳಲ್ಲಿ ತುಂಬಿದ್ದ ಗೋವಾ ಮದ್ಯ ಪತ್ತೆಯಾಗಿದೆ. ತೆಲಂಗಾಣ ರಾಜ್ಯದ ನೆಲ್ಲಗೊಂಡದ ವಾಹನ ಚಾಲಕ ಕೊತ್ತಪಳ್ಳಿ ನಾಗಶಾಲಿ ಸತ್ಯನಾರಾಯಣ ಆಚಾರಿ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಾಹನ ಮತ್ತು ಸರಾಯಿ ಮೌಲ್ಯ ಸೇರಿ ಒಟ್ಟೂ ಸುಮಾರು ₹50 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.