ಶಿರಸಿ: ಯಲ್ಲಾಪುರದಲ್ಲಿ ಡಿ.22 ಹಾಗೂ 23ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ. ಸಯ್ಯದ್ ಝಮೀರುಲ್ಲಾ ಶರೀಫ್ ಆಯ್ಕೆಯಾಗಿದ್ದಾರೆ.

ಭಾನುವಾರ ಇಲ್ಲಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದ ಆಯ್ಕೆ ನಡೆಯಿತು. ಸಾಹಿತಿಗಳಾದ ಡಾ. ಝಮೀರುಲ್ಲಾ ಶರೀಫ್, ಶಾಂತಿ ನಾಯಕ, ಶಾರದಾ ಭಟ್ಟ, ಗೋಪಾಲಕೃಷ್ಣ ಹಗಡೆ ಕೇರಿಮನೆ, ನಾಗೇಶ ಹೆಗಡೆ ಬಕ್ಕೆಮನೆ ಅವರ ಹೆಸರು ಚರ್ಚೆಗೆ ಬಂತು.

ಸಭೆಯಲ್ಲಿ ಪದಾಧಿಕಾರಿಗಳಾದ ಗಂಗಾಧರ ಕೊಳಗಿ, ಶಾರದಾ ಭಟ್ಟ ಕೂಜಳ್ಳಿ, ಅಮೃತ ರಾಮರಥ, ಶ್ರೀಧರ ಉಪ್ಪಿನಗಣಪತಿ, ನಾಗರಾಜ ಮಾಳ್ಕೋಡ, ವೇಣುಗೋಪಾಲ ಮದ್ಗುಣಿ, ಪ್ರಕಾಶ ಭಾಗವತ, ಪ್ರಕಾಶ ನಾಯಕ, ನಾಗರಾಜ ಹೆಗಡೆ, ನಾಗರಾಜ ಹರಪನಳ್ಳಿ, ಉಪೇಂದ್ರ ಘೋರ್ಪಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.