ಶಿರಸಿ: ‘ಎಲ್ಲರೂ ನಿರಹಂಕಾರ ಭಾವದ ಜೊತೆ ವಿನಯ ಬೆಳಸಿಕೊಳ್ಳಬೇಕು. ಆಗ ಮೋಕ್ಷ ಸಾಧ್ಯ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಚಾತುರ್ಮಾಸ್ಯ ವ್ರತಾಚರಣೆಯ ಹಿನ್ನೆಲೆಯಲ್ಲಿ ತೋರಣಸಿ ಭಾಗದ ಭಕ್ತರು ಗುರುವಾರ ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

‘ಭಕ್ತಿ ಸಾಧನೆ ಆಗುವುದೇ ಅಹಂಕಾರ ಕಡಿಮೆ ಆದಾಗ. ಸಾಧನೆ ಮಾರ್ಗದಲ್ಲಿ ನಿರಹಂಕಾರ ಭಾವ ಇರಬೇಕು’ ಎಂದರು.

‘ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಸಹಕಾರ ನೀಡಬೇಕು. ಎಲ್ಲರ ಹಿತ ಕಾಯುತ್ತ ಧರ್ಮ ಸಂರಕ್ಷಣೆ ಆಗಬೇಕು. ಆ ಭಾವದಲ್ಲಿ ಸರ್ಕಾರ, ಸಮಾಜ ಎಲ್ಲವೂ ಕೆಲಸ ಮಾಡಬೇಕು’ ಎಂದು ವಿವರಿಸಿದ ಸ್ವಾಮೀಜಿ, ‘ಅಹಂಕಾರ ಕಡಿಮೆ ಆದಷ್ಟು ನೆಮ್ಮದಿ. ಅಹಂಕಾರ ಹೆಚ್ಚಾದರೆ ಅನಾರೋಗ್ಯದ ಜೊತೆ ಕೌಟುಂಬಿಕ ಸಮಸ್ಯೆ, ಕಲಹಗಳೂ ಉಂಟಾಗುತ್ತದೆ. ಸಾಮಾಜಿಕ ಸಮಸ್ಯೆಗಳೂ ಹೆಚ್ಚಾಗುತ್ತದೆ. ತೀವ್ರತೆ, ಘರ್ಷಣೆ ಆಗುತ್ತದೆ. ಆರೋಗ್ಯ, ಸಾಮರಸ್ಯ, ಮುಖ್ಯವಾಗಿ ಧರ್ಮ ಸಂರಕ್ಷಣೆಗೆ ನಿರಹಂಕಾರ ಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗುರುಪಾದ ಹೆಗಡೆ ಹಲಸಿನಳ್ಳಿ, ಗಿರೀಶ ಭಟ್ ಕರಸುಳ್ಳಿ, ಆರ್.ಎಸ್.ಹೆಗಡೆ ಭೈರುಂಬೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.