ಕಾರವಾರ:

ನಗರದ ಜಿಲ್ಲಾ ರಂಗಮಂದಿರದಲ್ಲಿ ಇದೇ 5ರಂದು ಸಂಜೆ 5.30ಕ್ಕೆ ‘ಟ್ಯಾಲೆಂಟ್ಸ್ ಆಫ್ ಇಂಡಿಯಾ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಬಿಷ್ಠಣ್ಣವರ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ರಾಜ್ಯದಲ್ಲಿರುವ ಹಲವಾರು ವಿಶಿಷ್ಟ ಪ್ರತಿಭಾವಂತರಿಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ. ಅಂಥವರು ಅಸಂಘಟಿತರಾಗಿದ್ದು, ಅವಕಾಶಗಳಿಗೆ ಪರಿತಪಿಸುತ್ತಿದ್ದಾರೆ. ಅವರನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಮುಂಬೈನ ರಚನಾ ಎಂಟರ್ಟೈನ್ಮೆಂಟ್ ಸಂಸ್ಥೆಯ ಪ್ರೋತ್ಸಾಹದಲ್ಲಿ ನಮ್ಮ ರಾಜ್ಯದ ಮೂವರು ಮತ್ತು ಮುಂಬೈನ ಇಬ್ಬರು ಕಲಾವಿದರು ಅಂದು ಹಾಸ್ಯ, ಜಾದೂ, ಬೆಳಕು– ನೆರಳಿನಾಟ, ಮಿಮಿಕ್ರಿ ಮುಂತಾದ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಅಂಧ ಕಲಾವಿದ ಬಸವರಾಜ ಉಮರಾಣಿ, ‘ಅಭಿನವ ಜಾನಕಿ’ ಎಂದೇ ಪ್ರಸಿದ್ಧರಾಗಿರುವ ಗಂಗಮ್ಮ, ರಾಜ್ಯದ ಅತಿ ಎತ್ತರದ ವ್ಯಕ್ತಿ ಎಂಬ ಹೆಗ್ಗಳಿಕೆಯ, ಬೀದರ್ನಹನುಮಂತ ಮಾರುತಿ ಅವರೂ ಭಾಗವಹಿಸಲಿದ್ದಾರೆ’ ಎಂದುಹೇಳಿದರು.

ಕಲಾವಿದರ ಸಂಘಟಕ ವಸಂತ ಬಾಂದೇಕರ ಮಾತನಾಡಿ, ‘ಇದೇ ರೀತಿಯ ಕಾರ್ಯಕ್ರಮವನ್ನು ಇದೇ 6ರಂದು ಶಿರಸಿ ಮತ್ತು 7ರಂದು ಯಲ್ಲಾಪುರದಲ್ಲಿ ಆಯೋಜಿಸಲಾಗಿದೆ. ₹ 100 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ’ ಎಂದರು.

ಸದಾಶಿವಗಡದ ರಿದಂ ಹಾರ್ಟ್ ಬೀಟ್ ಡ್ಯಾನ್ಸ್ ಮತ್ತು ಆರ್ಟ್ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ವಿಜಯೇಂದ್ರ ಕುಮಾರೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.