ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ | ಪಣಸಗುಳಿ ಸೇತುವೆ ಜಲಾವೃತ: ಸಂಚಾರ ಸ್ಥಗಿತ

Published 3 ಜುಲೈ 2024, 15:14 IST
Last Updated 3 ಜುಲೈ 2024, 15:14 IST
ಅಕ್ಷರ ಗಾತ್ರ

ಯಲ್ಲಾಪುರ: ಗಂಗಾವಳಿ ನದಿಗೆ ಅಡ್ಡಲಾಗಿ ಪಣಸಗುಳಿಯಲ್ಲಿ ಕಾಂಕ್ರೀಟ್‌ ಪೈಪ್‌ಗಳನ್ನು ಬಳಸಿ ನಿರ್ಮಿಸಲಾದ ಸೇತುವೆ ಬುಧವಾರ ನಸುಕಿನ ಜಾವ ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ. ಸೇತುವೆ ನೀರಿನಿಂದ ಆವರಿಸಿರುವ ಕಾರಣ ಅಂಕೋಲಾ ತಾಲ್ಲೂಕಿನ ಶೇವ್ಕಾರ, ಕೈಗಡಿ, ಹೆಗ್ಗಾರ ಭಾಗದ ಜನರಿಗೆ ಸಂಪರ್ಕ ಕಷ್ಟಸಾಧ್ಯವಾಗಿದೆ.

‘ಪಣಸಗುಳಿ ಸೇತುವೆಯನ್ನು ನೆಲಮಟ್ಟದಲ್ಲಿ ನಿರ್ಮಿಸಲಾಗಿರುವ ಕಾರಣ ಮಳೆಗಾಲದಲ್ಲಿ ಸೇತುವೆ ಪದೇ ಪದೇ ಮುಳುಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸೇತುವೆ ಮುಳುಗಿದಾಗ ಸಾರ್ವಜನಿಕರು 10 ಕಿ.ಮೀ. ದೂರದ ರಾಮನಗುಳಿ ಸೇತುವೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಬೇಕಾಗುತ್ತದೆ. ಕಾರಣ ಈ ಸೇತುವೆಯನ್ನು ಎತ್ತರಿಸಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಭಟ್‌ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT