ಕಾರವಾರ: ಇಲ್ಲಿನ ಕೋಡಿಬಾಗದ ನದಿವಾಡಾದಲ್ಲಿ ಎರಡು ದಿನಗಳಿಂದ ಬೀಡುಬಿಟ್ಟಿರುವ ಬಿಳಿ ಗರಿಯ ರಣಹದ್ದು (ವೈಟ್ ರಂಪ್ಡ್ ವಲ್ಚರ್) ಜನರಲ್ಲಿ ಕುತೂಹಲದ ಜತೆಗೆ ಆತಂಕ ಮೂಡಿಸಿತು. ರಣಹದ್ದಿನ ಬೆನ್ನ ಮೇಲಿದ್ದ ಎಲೆಕ್ಟ್ರಾನಿಕ್ ಉಪಕರಣ ಇದಕ್ಕೆ ಕಾರಣವಾಯಿತು.

ನದಿವಾಡಾದ ಮನೆಗಳ ಚಾವಣಿ ಮೇಲೆ ಹಾರಾಡುತ್ತಿದ್ದ ಚಿಕ್ಕ ಗಾತ್ರದ ರಣಹದ್ದು ಗೂಢಚರ್ಯೆಗೆ ಬಳಕೆ ಆಗು ತ್ತಿರಬಹುದು ಎಂಬ ಚರ್ಚೆ ಜನರ ನಡುವೆ ನಡೆಯಿತು. ಸಮೀಪದಲ್ಲೇ ನೌಕಾನೆಲೆ ಇರುವ ಕಾರಣ ಚರ್ಚೆ ಗಂಭೀರ ವಾಗುತ್ತಿದ್ದಂತೆಯೇ ಪೊಲೀಸರು ಪಕ್ಷಿಯ ಕೂಲಂಕಷ ಪರಿಶೀಲನೆ ನಡೆಸಿದ್ದರು.

ಆದರೆ, ಈ ಪಕ್ಷಿಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಸಂಶೋಧನೆಗೆ ಉಪಯೋಗಿಸಿಕೊಳ್ಳುತ್ತಿರುವ ರಣಹದ್ದು ಎಂಬುದು ತಿಳಿಯುತ್ತಿದ್ದಂತೆ ಜನರು ನಿರು ಮ್ಮಳರಾದರು. ಸದ್ಯ ಅರಣ್ಯ ಇಲಾಖೆಯು ರಣಹದ್ದಿನ ಮೇಲೆ ನಿಗಾ ಇರಿಸಿದೆ.

‘ಅಳಿವಿನ ಅಂಚಿನಲ್ಲಿರುವ ಬಿಳಿಗರಿಯ ರಣಹದ್ದಿನ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಕಾರವಾರದಲ್ಲಿ ಪತ್ತೆಯಾಗಿರುವ ರಣಹದ್ದು ಇನ್ನೂ ಮರಿ. ಆಗಸ್ಟ್ನಲ್ಲಿ ಅದನ್ನು ಟ್ಯಾಗಿಂಗ್ಗೆ ಒಳಪಡಿಸಲಾಗಿತ್ತು. ನ.1 ರಂದು ಮಹಾರಾಷ್ಟ್ರದ ತಾಡೋಬಾ–ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ಹಾರಿಬಿಡಲಾ ಗಿತ್ತು. ಅದರ ಬೆನ್ನಿಗೆ ಟ್ರಾನ್ಸ್ಮೀಟರ್ ಅಳವಡಿಸಿದ್ದು, ಅದರ ಮೂಲಕ ಪಕ್ಷಿಯ ಚಲನವಲನದ ಮೇಲೆ ನಿಗಾ ಇರಿಸಲಾ ಗುತ್ತಿದೆ. ನಾಲ್ಕು ದಿನದಿಂದ ಕಾಳಿನದಿಯ ಅಂಚಿನಲ್ಲಿ ಅದು ಇರುವುದಾಗಿ ಉಪಗ್ರಹದ ಮಾಹಿತಿ ತೋರಿಸುತ್ತಿತ್ತು’ ಎಂದು ಬಿಎಚ್ಎನ್ಎಸ್ನ ಸಂಶೋಧಕ ರೊಬ್ಬರು ತಿಳಿಸಿದರು.

‘ರಣಹದ್ದನ್ನು ಗೂಢಚರ್ಯೆ ಪ್ರಕ್ರಿಯೆಗೆ ಬಳಸುವುದು ಕಷ್ಟ. ಸಂಶೋಧನೆಗೆ ಬಳಸಲಾಗುತ್ತಿರುವ ರಣಹದ್ದು ಇದಾಗಿರುವ ಕಾರಣ, ಅಲ್ಲದೆ ಅಪ್ರಾಪ್ತ ವಯಸ್ಸಿನಲ್ಲಿರು ವುದರಿಂದ ಅದರ ಆರೈಕೆಯನ್ನು ಸೂಕ್ಷ್ಮವಾಗಿ ಮಾಡಬೇಕು’ ಎಂದು ಪ್ರಾಣಿ ಸಂಶೋಧಕ ಅಮಿತ್ ಹೆಗಡೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.