ಜೊಯಿಡಾ: ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆ ಎದುರು ಯುವಕನೊಬ್ಬ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ರಾಮನಗರ ಹನುಮಾನ ಗಲ್ಲಿಯ ಭಾಸ್ಕರ ಬೋಂಡೆಲ್ಕರ (28) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಗಂಭೀರವಾಗಿ ಗಾಯಗೊಂಡ ಆತನನ್ನು ಚಿಕಿತ್ಸೆಗೆ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

'ತನ್ನ ಮಾವನ ಮೇಲೆ ದಾಖಲಾದ ಪ್ರಕರಣದ ಕುರಿತು ವಿಚಾರಿಸಲು ಯುವಕ ಠಾಣೆಗೆ ಬಂದಿದ್ದ. ಪಾನಮತ್ತನಾಗಿ ಬಂದ ಆತನಿಗೆ ಕ್ರೈಮ್ ಪಿಎಸ್ಐ ಕುಡಿದು ಬಂದು ವಾಹನ ಚಲಾಯಿಸಬಾರದು ಎಂದು ಬುದ್ಧಿವಾದ ಹೇಳಿದ್ದರು. ದ್ವಿಚಕ್ರ ವಾಹನದ ಕೀಯನ್ನು ವಶಕ್ಕೆ ಪಡೆದು, ನಿನ್ನ ಗೆಳೆಯರು ಅಥವಾ ಕುಟುಂಬದವರನ್ನು ಕರೆಯಿಸಿ ಅವರ ಜತೆ ಮನೆಗೆ ಹೋಗುವಂತೆ ಸೂಚಿಸಿದ್ದರು. ಇದೇ ವೇಳೆ ಆತ ಪೆಟ್ರೋಲ್ ತಂದು ಬೆಂಕಿ ಹೆಚ್ಚಿಸಿಕೊಂಡಿದ್ದಾನೆ. ತಕ್ಷಣವೇ ಬಟ್ಟೆ ದೇಹಕ್ಕೆ ಸುತ್ತಿ ಬೆಂಕಿ ನಂದಿಸಿದ್ದಾರೆ' ಎಂದು ರಾಮನಗರ ಠಾಣೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಆತ್ಮಹತ್ಯೆಗೆ ಯತ್ನಿಸಿದ ಯುವಕ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ವಿಡಿಯೊ ಮಾಡಿ ಪಿಎಸ್ಐ ಮೇಲೆ ಕಿರುಕುಳದ ಆರೋಪ ಮಾಡಿದ್ದಾನೆ.

'ಜೂಜಾಟದ ಸಂದರ್ಭದಲ್ಲಿ ದಾಳಿ ನಡೆದಾಗ ರಾಮನಗರ ಪಿಎಸ್ಐ ಅವರು ₹3.65 ಲಕ್ಷ ವಶಕ್ಕೆ ಪಡೆದಿದ್ದರು. ಆದರೆ ಪ್ರಕರಣದಲ್ಲಿ ₹36 ಸಾವಿರ ಮಾತ್ರ ವಶಕ್ಕೆ ಪಡೆದಿರುವುದಾಗಿ ತೋರಿಸಿದ್ದರು. ಈ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳಲ್ಲಿ ದೂರು ನೀಡಲಾಗಿತ್ತು, ದಾಂಡೇಲಿ ಡಿವೈಎಸ್ಪಿ ಅವರಿಗೆ ಮನವಿ ನೀಡಿದಾಗ ಅವರು ಮನವಿ ಸ್ವಿಕರಿಸಲಿಲ್ಲ. ಈ ಘಟನೆ ನಂತರ ಪಿಎಸ್ಐ ತನಗೆ ಸಾಕಷ್ಟು ಕಿರುಕುಳ ನೀಡಿದರು' ಎಂದು ಆರೋಪಿಸಿರುವ ದೃಶ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.