ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿ ಹುಲಿಗೆಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿಯೇ ಕಸ್ತೂರ ಬಾ ಗಾಂಧಿ ವಸತಿ ನಿಲಯದ ಬಾಲಕಿಯರ ವಾಸ
ಶಾಲಾ ಆವರಣವ ಬಯಲಿನಲ್ಲಿಯೇ ಬಟ್ಟೆ ಸ್ವಚ್ಛಗೊಳಿಸುವ ಸ್ಥಳ
ವಸತಿ ನಿಲಯದ ಬಾಲಕಿಯರ ಶೌಚಾಲಯ ಮತ್ತು ಸ್ನಾನಗೃಹಗಳು
ಕಸ್ತೂರ ಬಾ ಗಾಂಧಿ ವಸತಿ ನಿಲಯದ ಸುಸಜ್ಜಿತ ಕಟ್ಟಡ ನಿರ್ಮಿಸುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು
ಮೈಲೇಶ್ ಬೇವೂರು ಕ್ಷೇತ್ರ ಶಿಕ್ಷಣಾಧಿಕಾರಿಸರ್ಕಾರ ಕೂಡಲೇ ಹುಲಿಗೆಮ್ಮಜ್ಜಿ ನೀಡಿದ ಜಮೀನಿನಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಿಸಬೇಕು ಅದರ ಮೂಲ ಉದ್ಧೇಶ ಈಡೇರಬೇಕು
ಎಚ್.ದೊಡ್ಡಬಸಪ್ಪ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷಈಡೇರದ ಹುಲಿಗೆಮ್ಮಜ್ಜಿ ಕನಸು
ಗ್ರಾಮದ ಪರಿಶಿಷ್ಟ ಸಮುದಾಯದ ದೇವದಾಸಿ ಮಹಿಳೆ ಹುಲಿಗೆಮ್ಮಜ್ಜಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ತನಗಿದ್ದ 13.17ಎಕರೆ ಫಲವತ್ತಾದ ಜಮೀನನ್ನು 2000ದ ಜುಲೈನಲ್ಲಿ ದಾನವಾಗಿ ನೀಡಿದ್ದರು. ಸರ್ಕಾರ ಕೇವಲ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿತಾದರೂ ದಾನದ ಮೂಲ ಉದ್ಧೇಶವನ್ನು ಮಾತ್ರ ಈಡೇರಿಸಿಲ್ಲ. ತನ್ನ ಆಸೆಯೊಂದಿಗೇ ಅಜ್ಜಿ ಕೊನೆಯುಸಿರೆಳೆದರು.