ಹೊಸಪೇಟೆ (ವಿಜಯನಗರ): ‘ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಜನತೆಗೆ ಏನೇನು ಭರವಸೆ ನೀಡಿದ್ದರು. ಅವೆಲ್ಲವೂ ಈಡೇರಿಸಿದ್ದಾರೆಯೇ ಕೇಳಿ. ಹೀಗಾಗಿ ಅವರಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಿದರೂ ಸಂಡೂರು ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.

‘ದೂಳು ನುಂಗಿ, ದೂಳು ಕುಡಿದು ಹಣ ಮಾಡಿದ್ದು, ಮತದಾರರಿಗೆ ದರ ಫಿಕ್ಸ್ ಮಾಡಿದ ಅಪಕೀರ್ತಿ ಜನಾರ್ದನ ರೆಡ್ಡಿಗೆ ಸಲ್ಲುತ್ತದೆ. ಬಳ್ಳಾರಿ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಿದ್ದರಿಂದ ಬಾರಪ್ಪ ಇನ್ನೆಲ್ಲಿ ಏನೇನ್ ಇದೆ ಲೂಟಿ ಮಾಡು ಎಂದಷ್ಟೇ ಹೇಳಿದಂತಾಗಿದೆ’ ಎಂದು ಸೋಮವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಪ್ರಜಾತಂತ್ರವನ್ನ ಕಾಯಬೇಕಾಗಿರುವುದು ಮತದಾರರು ಮತ್ತು ಮಾಧ್ಯಮದವರು. ಅವರನ್ನೇ ಭ್ರಷ್ಟರನ್ನಾಗಿಸಿದರೆ, ಕೇಳುವವರು ಯಾರು? ಕೇಂದ್ರ ಸರ್ಕಾರ ಸಿ ಕ್ಯಾಟಗರಿ ಗಣಿಗಾರಿಕೆಗೆ ಅವಕಾಶ ನೀಡುವುದಾದರೆ ಮಧ್ಯಮ ವರ್ಗದವರೂ ಗಣಿಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನಿಯಮಗಳನ್ನು ಸರಳೀಕರಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.