ಹಂಪಿ(ಹೊಸಪೇಟೆ): ಕಾಂತಾರ ಸಿನಿಮಾ ನೆನಪಿಸುವ ನಿಸರ್ಗ ದೇವ ಭೂತಕೋಲ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಹೂಗಳಲ್ಲಿ ಅರಳಿದರೆ ಹೇಗಿರುತ್ತದೆ?

ಅದನ್ನು ನೋಡಬೇಕೆಂದರೆ ನೀವು ಹಂಪಿಗೆ ಭೇಟಿ ಕೊಡಬೇಕು. ಹಂಪಿ ಉತ್ಸವದ ಅಂಗವಾಗಿ ಹಂಪಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವು ಹತ್ತು ಹಲವು ಕಾರಣಗಳಿಗಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಮಹಿಳೆಯರು, ಮಕ್ಕಳೆನ್ನದೆ ಎಲ್ಲಾ ವಯೋಮಾನದವರು ಬಂದು ಹೂಗಳಲ್ಲಿ ಅರಳಿದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಗಾನಯೋಗಿ ಪಂಡಿತ್ ಪುಟ್ಟರಾಜ ಪಂಚಾಕ್ಷರಿ ಗವಾಯಿ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಕಾಯಕಯೋಗಿ ತುಮಕೂರಿನ ಶಿವಕುಮಾರ ಶ್ರೀಗಳು, ರಂಗೋಲಿಯಲ್ಲಿ ಅರಳಿದ್ದಾರೆ. ಹಳದಿ, ಕೆಂಪು ಗುಲಾಬಿ, ಸೇವಂತಿಯ 800 ಹೂಗಳಲ್ಲಿ ಅರಳಿರುವ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಇನ್ನೊಂದು ಪ್ರಮುಖ ಆಕರ್ಷಣೆ. ಎರಡೂ ಬದಿಯಲ್ಲಿ ಹೂವಿನ ಸಾಲು ಮಂಟಪಗಳು, ಅಪ್ಪು ಪ್ರತಿಮೆ ಕಣ್ಮನ ಸೆಳೆಯುತ್ತಿದೆ.

ಎತ್ತಿನ ಬಂಡಿ, ಹೊಸಪೇಟೆಯ ಬಾಳೆ, ಹರಪನಹಳ್ಳಿಯ ಟೊಮೆಟೊ, ಹಗರಿಬೊಮ್ಮನಹಳ್ಳಿಯ ದಾಳಿಂಬೆ, ಹಡಗಲಿಯ ಮಲ್ಲಿಗೆ, ಕೊಟ್ಟೂರಿನ ಈರುಳ್ಳಿ, ಕೂಡ್ಲಿಗಿಯ ಹುಣಸೆ ಮಾದರಿ ಕೂಡ ಗಮನ ಸೆಳೆಯುತ್ತಿವೆ. ಅಪರೂಪದ ಗಿಡ ಮೂಲಿಕೆ ಸಸ್ಯಗಳು, ಹಣ್ಣು, ಹಂಪಲಿನ ಮಳಿಗೆಗಳು, ಕೈತೋಟ, ಉದ್ಯಾನವನ, ವರ್ಟಿಕಲ್ ಗಾರ್ಡ್‌ನ್, ಹೂಕುಂಡಗಳ ಸೈಕಲ್ ಮಾದರಿ, ಹೂಗಳಲ್ಲಿ ಅರಳಿದ ಕಡಲೆಕಾಳು ಗಣಪ, ಸಾಸಿವೆ ಕಾಳು ಗಣಪ, ಉಗ್ರ ನರಸಿಂಹ, ಪುರಂದರ ಮಂಟಪ, ನರ್ತಕಿಯರು ಆಕರ್ಷಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.