ಹರಪನಹಳ್ಳಿ (ವಿಜಯನಗರ ಜಿಲ್ಲೆ): ಮಹಿಳೆಯೊಬ್ಬರಿಗೆ ವರದಕ್ಷಿಣೆ ಕಿರುಕುಳ ನೀಡಿದ್ದು ಸೇರಿ ಮೂವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಎರಡು ವರ್ಷದ ಹಿಂದೆ ವಿವಾಹವಾಗಿತ್ತು. ಮದುವೆ ವೇಳೆ ವರನಿಗೆ 12 ತೊಲ ಚಿನ್ನ ಕೊಡಲಾಗಿತ್ತು. ಪತಿ ಸೇರಿ ಮನೆಯವರು ಮದುವೆಯಾದ 3 ತಿಂಗಳಲ್ಲೇ ಮಹಿಳೆಗೆ ಕೆಲಸ ಬಿಡಲು ಹೇಳಿ, ಜಮೀನಿನಲ್ಲಿ ಕೆಲಸ ಮಾಡು ಎಂದು ಮಾನಸಿಕ ಹಿಂಸೆ ನೀಡಿದ್ದಾರೆ. ಹೀಗೆ ಮುಂದುವರಿದ ಹಿಂಸೆ ತೀವ್ರ ರೂಪ ಪಡೆದು ವರದಕ್ಷಿಣೆ ₹ 20 ಲಕ್ಷ ಕೊಡುವಂತೆ ಕಿರುಕುಳ ನೀಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಜಿ ಪಂಚಾಯಿತಿ ಮೂಲಕ ಮಾತುಕತೆ ನಡೆಸಲೆಂದು ಮಹಿಳೆ ಮತ್ತು ಇತರ ಇಬ್ಬರು ಬಂದಾಗ ಅವರ ಮೇಲೆ ಹಲ್ಲೆ ನಡೆಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.