ಹೊಸಪೇಟೆ(ವಿಜಯನಗರ): ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ₹5 ಸಾವಿರ ನಗದು, ಅವರ ಬ್ಯಾಗ್ನ್ನು ಹಿಂತಿರುಗಿಸಿ ಪೊಲೀಸ್ ಕಾನ್ಸ್ಟೆಬಲ್, ಗೃಹ ರಕ್ಷಕ ದಳದ ಸಿಬ್ಬಂದಿ ಪ್ರಾಮಾಣಿಕತೆ ತೋರಿದ್ದಾರೆ.

ಕಾನ್ಸ್ಟೆಬಲ್ ಮಂಜುನಾಥ ಪಾಟೀಲ್, ಗೃಹರಕ್ಷಕ ದಳದ ಸಿಬ್ಬಂದಿ ಮೈನುದ್ದೀನ್ ಅವರು ನಾಗಪುರದ ನಿವಾಸಿ ರವೀಂದ್ರ ಮಿಶ್ರಾ ಎಂಬುವರಿಗೆ ಹಣ, ಬ್ಯಾಗ್ ಮರಳಿಸಿದ್ದಾರೆ.

ಡಿ. 5ರಂದು ರವೀಂದ್ರ ಮಿಶ್ರಾ ಎಂಬುವರು ನಾಗಪುರದಿಂದ ನಗರಕ್ಕೆ ಬಂದಿಳಿದಿದ್ದಾರೆ. ಪ್ಲಾಟ್ಫಾರ್ಮ್ನಲ್ಲಿ ಟೀ ಕುಡಿದು, ಬ್ಯಾಗ್ ಅಲ್ಲಿಯೇ ಮರೆತು ಹಂಪಿಗೆ ತೆರಳಿದ್ದಾರೆ. ಕರ್ತವ್ಯದಲ್ಲಿದ್ದ ಮಂಜುನಾಥ, ಮೈನುದ್ದೀನ್ ಅವರು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ರವೀಂದ್ರ ಅವರ ದಾಖಲೆ ಪತ್ರಗಳು ಸಿಕ್ಕಿವೆ. ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಬಳಿಕ ರವೀಂದ್ರ ಅವರು ರೈಲು ನಿಲ್ದಾಣಕ್ಕೆ ಬಂದು, ಹಣ, ಬ್ಯಾಗ್ ಹಾಗೂ ಅದರಲ್ಲಿದ್ದ ದಾಖಲೆಗಳನ್ನು ಪಡೆದು, ಡಿ. 8ರಂದು ನಾಗಪುರಕ್ಕೆ ಮರಳಿದ್ದಾರೆ. ರವೀಂದ್ರ ಪತ್ರ ಬರೆದು, ಇಬ್ಬರೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.