ತಜ್ಞ ವೈದ್ಯರು ಲಭ್ಯವಾದೊಡನೆ ಕಮಲಾಪುರ ಪಿಎಚ್‌ಸಿಗೆ ಒದಗಿಸಲಾಗುವುದು. ಅದನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಸಹ ನಡೆಯುತ್ತಲೇ ಇದೆ
ಡಾ.ಎಲ್.ಆರ್.ಶಂಕರ್ ನಾಯ್ಕ್ ಡಿಎಚ್‌ಒ
ಸುನಿತಾ ಶ್ರೀನಿವಾಸ್
ಈ ಪಿಎಚ್‌ಸಿಗೆ ಪ್ರತಿದಿನ 80ಕ್ಕೂ ಅಧಿಕ ಮಹಿಳೆಯರು ಬರುತ್ತಾರೆ. ಕೇವಲ ಒಬ್ಬ ವೈದ್ಯರಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಸರ್ಕಾರ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು
ಸುನಿತಾ ಶ್ರೀನಿವಾಸ್ ಕಮಲಾಪುರ ನಿವಾಸಿ
ವೀರೇಶ್ ಕುಮಾರ್
ಸರ್ಕಾರ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಇದೇ ರೀತಿ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ
ಕೊಟಲ್ ವೀರೇಶ್ ಕುಮಾರ್ ಸಂಚಾಲಕರು ದಲಿತ ಸಂಘರ್ಷ ಸಮಿತಿ
ಆನಂದರಾಜ್ ಹೆಗ್ಡೆ
ಪ್ರತಿಯೊಂದು ಸಮಸ್ಯೆಗೂ ನಮ್ಮನ್ನು ಹೊಸಪೇಟೆಗೆ ಕಳಿಸುತ್ತಿದ್ದಾರೆ ರೈಲ್ವೆ ಗೇಟ್ ನಮ್ಮ ಜೀವವನ್ನು ನುಂಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು
ಆನಂದ್ ರಾಜ್ ಹೆಗಡೆ ಸ್ಥಳೀಯ ಮುಖಂಡರು ಕಮಲಾಪುರ
‘ನಮ್ಮದಲ್ಲದ’ ಕ್ಲಿನಿಕ್
ಕಮಲಾಪುರ ಪಟ್ಟಣದ ಹೃದಯ ಭಾಗದಲ್ಲೇ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ನಮ್ಮ ಕ್ಲಿನಿಕ್’ ಇದೆ. ಆದರೆ ಒಬ್ಬ ದಾದಿ ಬಿಟ್ಟರೆ ಅಲ್ಲಿ ತಜ್ಞ ವೈದ್ಯರೇ ಇಲ್ಲ. ಹೀಗಾಗಿ ರೋಗಿಗಳು ಅಲ್ಲಿಗೆ ಹೋಗುತ್ತಲೇ ಇಲ್ಲ.
‘ಆಯುಷ್ ವೈದ್ಯರನ್ನು ನಿಯೋಜಿಸುವಂತಿಲ್ಲ‘
‘ಅಲೋಪತಿ ವೈದ್ಯರು ಸಿಗುತ್ತಿಲ್ಲ. ಆಯುರ್ವೇದ ಸಹಿತ ಆಯುಷ್ ವೈದ್ಯರು ಲಭ್ಯವಿದ್ದರೂ ಅವರನ್ನು ಗುತ್ತಿಗೆ ಆಧಾರದಲ್ಲೂ ನಿಯೋಜಿಸಬಾರದು ಎಂದು ಸರ್ಕಾರ ಹೊಸದಾಗಿ ಆದೇಶ ಹೊರಡಿಸಿದೆ. ಹೀಗಾಗಿ ಪಿಎಚ್‌ಸಿಗಳಲ್ಲಿ ಸಹ ಚಿಕಿತ್ಸೆ ನೀಡುವುದು ಕಷ್ಟಕರ ಎನಿಸಿದೆ’ ಎಂದು ಡಿಎಚ್‌ಒ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.