ಹೊಸಪೇಟೆ(ವಿಜಯನಗರ): ಕಂದಾಯ ಇಲಾಖೆಯ ಹಣವನ್ನು ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡು, ವಂಚನೆ ಮಾಡಿದ ಕಂಪ್ಲಿ ತಾಲ್ಲೂಕು ಕಚೇರಿಯ ಎಫ್ಡಿಎ ವೆಂಕಟಸ್ವಾಮಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ 2 ವರ್ಷ ಸಾದಾ ಸೆರೆಮನೆ ವಾಸ ಮತ್ತು ₹2,500 ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಘಟನೆ ವಿವರ: ತಹಶೀಲ್ದಾರ್ ಕಚೇರಿಗೆ ಬಳ್ಳಾರಿಯ ಕೌಟುಂಬಿಕ ಕಲಹ ನ್ಯಾಯಾಲಯಕ್ಕೆ ಬಾಕಿ ಇರುವ ಹಣಕ್ಕೆ ಸಂಬಂಧಿಸಿದಂತೆ ಬಂದ ₹1.25 ಲಕ್ಷ ಬ್ಯಾಂಕ್ ಡಿಡಿ ಮೊತ್ತವನ್ನು 2020ರ ಫೆ.5ರಂದು ಕಂಪ್ಲಿ ತಹಶೀಲ್ದಾರರ ಬ್ಯಾಂಕ್ ಖಾತೆಗೆ ಜಮಾ ಮಾಡದೇ ಎಫ್ಡಿಎ ವೆಂಕಟಸ್ವಾಮಿ ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ಹಂತ ಹಂತವಾಗಿ ಇಲಾಖೆಗೆ ವಂಚಿಸಿದ್ದರು.

ಈ ಬಗ್ಗೆ ಕಂಪ್ಲಿ ತಹಶೀಲ್ದಾರ್ ರೇಣುಕಾ ದೂರಿನ ಮೇರೆಗೆ ಪಿಎಸ್ಐ ಮೌನೇಶ್ ರಾಥೋಡ್, ತನಿಖೆ ನಡೆಸಿ ಆರೋಪಿ ವಿರುದ್ದ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನಗರದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಬಿ.ಎನ್.ರಮೇಶ್ ಬಾಬು ಅವರು, ಆರೋಪಿ ಅಪರಾಧ ಎಸಗಿರುವುದು ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಟಿ.ರೇವಣಸಿದ್ದಪ್ಪ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.