ಹೊಸಪೇಟೆ (ವಿಜಯನಗರ): ಜಿ20 ಶೃಂಗಸಭೆಗೆ ಸಜ್ಜಾಗುತ್ತಿರುವ ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರು ಹಾಕಿ, ರಸ್ತೆ ಬದಿಗೆ ಬಿಳಿ ಪೇಂಟ್ ಬಳಿಯುವ ಕೆಲಸ ನಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಕಡ್ಡಿರಾಂಪುರ ಬಳಿ ಪೇಂಟ್ ಬಳಿಯುವ ವಾಹನದಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ವಾಹನ ಭಸ್ಮವಾಗಿದೆ.

‘ವಾಹನದಲ್ಲಿ ಇಟ್ಟಿದ್ದ ಸಿಲಿಂಡರ್ ಸ್ಫೊಟಗೊಂಡು ಬೆಂಕಿ ಹತ್ತಿಕೊಂಡಿತು. ತಕ್ಷಣ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವಾಹನ ಸುಟ್ಟು ಹೋಗಿದೆ. ಯಾರಿಗೂ ಏನೂ ತೊಂದರೆ ಆಗಿಲ್ಲ’ ಎಂದು ಎಸ್ಪಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದರು.

ಹೊಸಪೇಟೆ ಸಮೀಪದ ಅನಂತಶಯನಗುಡಿ ಪ್ರದೇಶದಿಂದ ಹಂಪಿ ದ್ವಾರದವರೆಗೆ ಸುಮಾರು ಎಂಟು ಕಿ.ಮೀ. ರಸ್ತೆಯನ್ನು ಈಗಾಗಲೇ ಸುಸಜ್ಜಿತಗೊಳಿಸಲಾಗಿದ್ದು, ಬಳ್ಳಾರಿ ರಸ್ತೆಯ ಪಿ.ಕೆ.ಹಳ್ಳಿಯಿಂದ ಕಮಲಾಪುರದವರೆಗಿನ ರಸ್ತೆಗೂ ಡಾಂಬರು ಹಾಕಲಾಗಿದೆ. ಕಮಲಾಪುರ ಸಮೀಪ ಹಾಗೂ ಕಡ್ಡಿರಾಂಪುರ ಪ್ರದೇಶದಲ್ಲಿ ಕೊನೆಯ ಹಂತದ ಡಾಂಬರ್ ಹಾಕುವ ಕಾರ್ಯ ಈಗ ನಡೆಯುತ್ತಿದೆ. ಈ ಎಲ್ಲ ರಸ್ತೆ ಕಾಮಗಾರಿಗಳಿಗೆ ₹ 15 ಕೋಟಿ ವ್ಯಯಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.