ಹಂಪಿ (ಹೊಸಪೇಟೆ): ಅಳುಕಿನಿಂದಲೇ ಜಿಪ್ಲೈನ್ನಲ್ಲಿ ಗಾಳಿಯಲ್ಲಿ ತೇಲಾಡಿದ ಮಕ್ಕಳು, ಗುರಿ ಮುಟ್ಟಿದ ನಂತರ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನು, ಜತನದಿಂದ ಬಂಡೆಗಲ್ಲುಗಳನ್ನು ಏರಿದ ಮಕ್ಕಳಲ್ಲಿ ಏನೋ ಸಾಧಿಸಿದ ಖುಷಿ.

ಹಂಪಿ ಉತ್ಸವದ ಅಂಗವಾಗಿ ಸಾಸಿವೆ ಕಾಳು ಗಣಪ ಸ್ಮಾರಕದ ಬಳಿ ನಡೆದ ಸಾಹಸ ಕ್ರೀಡೆಗಳಲ್ಲಿ ಕಂಡು ಬಂದ ದೃಶ್ಯಗಳಿವು. ಬಂಡೆಯೊಂದರ ಮೇಲೆ ಇಳಿ ಬಿಟ್ಟ ಹಗ್ಗದ ಏಣಿಯನ್ನು ಸುಲಭವಾಗಿ ಹತ್ತಿ ಬಿಡುತ್ತೇನೆ ಎಂಬ ಛಲದಿಂದ ಹೆಜ್ಜೆ ಇಟ್ಟ ಬಾಲಕನಿಗೆ ಅದನ್ನು ಏರಿದ ನಂತರವೇ ತಿಳಿದಿದ್ದು ಇದು ನಿಜವಾದ ಸಾಹಸದ ಕೆಲಸ ಎನ್ನುವುದು. ನೋಡಲಷ್ಟೇ ಇದು ಆಕರ್ಷಕ. ಆದರೆ, ಹೀಗೆ ಮಾಡಬೇಕಾದರೆ ಧೈರ್ಯ, ಸಾಹಸ, ಇಚ್ಛಾಶಕ್ತಿ ಬೇಕಾಗುತ್ತದೆ ಎನ್ನುವುದು.

ಉಯ್ಯಾಲೆ ಆಡುತ್ತಿದ್ದ ಹಗ್ಗಕ್ಕೆ ಕಟ್ಟಿದ ಲೋಹದ ಮೆಟ್ಟಿಲುಗಳನ್ನು ಹತ್ತಲು ಹರಸಾಹಸ ಪಟ್ಟ ಬಾಲಕ ಮೋಹನರಾಜ್ ಬಂಡೆ ತುದಿ ಏರಿ ಹಂಪಿಯ ನಯನ ಮನೋಹರ ನೋಟ ನೋಡಿ ಸಂಭ್ರಮಿಸಿದ. ಕಮಾಂಡೊ ನೆಟ್, ರ್ಯಾಪ್ಲಿಂಗ್ (ಬಂಡೆಯಿಂದ ಹಗ್ಗದ ಮೂಲಕ ಇಳಿವುದು), ರಾಕ್ ಕ್ಲೈಂಬಿಂಗ್ (ಹಗ್ಗದ ಮೂಲಕ ಬಂಡೆ ಏರುವುದು), ಬಾಣ ಬಿಡುವುದು, ಕೃತಕ ಗೋಡೆ ಏರುವುದು ಹಾಗೂ ಜಿಪ್ಲೈನ್ನಲ್ಲಿ ಜಾರಿದ ಒಬ್ಬೊಬ್ಬರದು ಒಂದೊಂದು ರೀತಿಯ ಭಿನ್ನ ಅನುಭವ. ಹೊಸಪೇಟೆ, ತಾಲ್ಲೂಕಿನ ಕಮಲಾಪುರ ಭಾಗದ ಮಕ್ಕಳು, ಯುವಕರೇ ಹೆಚ್ಚಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.