ಹೊಸಪೇಟೆ (ವಿಜಯನಗರ): ‘ಜೆಎಸ್‌ಡಬ್ಲ್ಯೂ, ಬಿಎಂಎಂ ಸಹಭಾಗಿತ್ವದಲ್ಲಿ ತಾಲ್ಲೂಕಿನ ಡಣಾಯಕನಕೆರೆ ಮತ್ತು ಗೊಲ್ಲರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಶೌಚಾಲಯಗಳ ಉದ್ಘಾಟನೆ ಸೋಮವಾರ (ಮಾ.6) ಬೆಳಿಗ್ಗೆ 10.30ಕ್ಕೆ ನಡೆಯಲಿದೆ’ ಎಂದು ಹೊಸಪೇಟೆ ‘ರೌಂಡ್ ಟೇಬಲ್’ ಸಂಸ್ಥೆ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಶೀಘ್ರದಲ್ಲೇ ತಾಲ್ಲೂಕಿನ ಗರಗ, ನಾಗಲಾಪುರದಲ್ಲಿ ಇನ್ನೆರಡು ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ನಿರ್ಮಾಣ ಕಾರ್ಯ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ನಾಲ್ಕು ಶೌಚಾಲಯ ಬ್ಲಾಕ್‌ಗಳ ನಿರ್ಮಾಣಕ್ಕೆ ₹50 ಲಕ್ಷ ವೆಚ್ಚವಾಗಲಿದೆ. ಪ್ರತಿ ಬ್ಲಾಕ್‌ನಲ್ಲಿ ತಲಾ ಎಂಟು ಬಾಲಕರು ಹಾಗೂ ಬಾಲಕಿಯರ ಪ್ರತ್ಯೇಕ ಶೌಚಾಲಯಗಳು ಇರಲಿವೆ. ಶೌಚಾಲಯಗಳನ್ನು ನಿರ್ಮಿಸಿ ಶಾಲೆಯವರಿಗೆ ಹಸ್ತಾಂತರಿಸಲಾಗುವುದು. ಅವುಗಳ ನಿರ್ವಹಣೆ ಜವಾಬ್ದಾರಿ ಅವರಿಗೆ ವಹಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಸ್ಮಾರ್ಟ್‌ಕ್ಲಾಸ್, ಗ್ರಂಥಾಲಯ ನವೀಕರಣ, 600ಕ್ಕೂ ಹೆಚ್ಚು ಬೆಂಚ್‌ಗಳನ್ನು ನೀಡಲಾಗಿದೆ. 300ಕ್ಕೂ ಅಧಿಕ ಮಕ್ಕಳಿಗೆ ಶೂ ವಿತರಣೆ, ತಾಲ್ಲೂಕಿನ ಮಲಪನಗುಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಿಸಲು ಯೋಜಿಸಲಾಗಿದೆ ಎಂದು ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

ಕಾರ್ಯದರ್ಶಿ ಮನೀಶ್, ವಿಮಲ್ ಜೈನ್, ಅಮಿತ್ ಪತ್ತಿಕೊಂಡ, ಸಂದೀಪ್ ಪತ್ತಿಕೊಂಡ, ಅಭಿನೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.