ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಈಗಾಗಲೇ ಭರ್ತಿಯಾಗಿಯೇ ಇದ್ದ ಅಣೆಕಟ್ಟೆಯಿಂದ 18 ಕ್ರಸ್ಟ್ಗೇಟ್ ತೆರೆದು ನೀರನ್ನು ಹೊರಬಿಡಲಾಗಿದೆ.

ಈ ವರ್ಷ ಇದೀಗ ಮೂರನೇ ಬಾರಿಗೆ ನೀರನ್ನು ಕ್ರಸ್ಟ್ಗೇಟ್ ತೆರೆದು ಸತತವಾಗಿ ಹೊರಬಿಡುವ ಕೆಲಸ ನಡೆದಿದೆ. ಜುಲೈ 22ರಿಂದ ಆಗಸ್ಟ್ 10ರವರೆಗೆ, ಸೆಪ್ಟೆಂಬರ್ 4ರಿಂದ 17ರವರೆಗೆ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗಿತ್ತು. ಈ ನಡುವೆ ಆಗಸ್ಟ್ 10ರಂದು 19ನೇ ಸಂಖ್ಯೆಯ ಕ್ರಸ್ಟ್ಗೇಟ್ ನೀರಲ್ಲಿ ಕೊಚ್ಚಿ ಹೋಗಿತ್ತು. ಒಂದೇ ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆದು ಮತ್ತೆ ಜಲಾಶಯ ಭರ್ತಿಯಾಗುವಂತೆ ಮಾಡಲಾಗಿತ್ತು. ಈ ವರ್ಷ 200 ಟಿಎಂಸಿ ಅಡಿಗೂ ಹೆಚ್ಚು ನೀರು ನದಿಗೆ ಹರಿದು ಹೋಗಿದೆ. 2022ರಲ್ಲಿ 400 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದು ಹೋಗಿತ್ತು.

ಸದ್ಯ ಜಲಾಶಯಕ್ಕೆ 50,146 ಕ್ಯುಸೆಕ್ನಷ್ಟು ಒಳಹರಿವು ಇದ್ದು, 49,966 ಕ್ಯುಸೆಕ್ನಷ್ಟು ಹೊರಹರಿವು ಇದೆ. ಉತ್ತಮ ಮಳೆಯ ಕಾರಣ ಈ ಬಾರಿ ತುಂಗಭದ್ರಾ ಕಾಲುವೆಗಳ ವ್ಯಾಪ್ತಿಯ ಸುಮಾರು 15 ಲಕ್ಷ ಎಕರೆ ಪ್ರದೇಶದಲ್ಲಿ ಎರಡನೇ ಬೆಳೆಗೂ ನೀರು ಸಿಗುವುದು ಈಗಾಗಲೇ ದೃಢಪಟ್ಟಿದೆ.

ಮುನ್ಸೂಚನೆ ನೀಡಿಲ್ಲ:

ತುಂಗಭದ್ರಾ ಮಂಡಳಿ ಯಾವುದೇ ಮುನ್ಸೂಚನೆ ನೀಡದೆ ಅಣೆಕಟ್ಟೆಯಿಂದ ನೀರು ಹರಿಸಿರುವುದಕ್ಕೆ ನದಿಯ ಕೆಳಭಾಗದಲ್ಲಿ ರೈತರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಹಂಪಿಯ ಪುರಂದರ ಮಂಟಪ ಬಹುತೇಕ ನೀರಿನಿಂದ ಆವೃತವಾಗಿದೆ.
.ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ನವವೃಂದಾವನಗಡ್ಡೆ ಸಂಪರ್ಕ ಕಡಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.