ಮರಿಯಮ್ಮನಹಳ್ಳಿ: ಪ್ರೀತಿಸಿದ ಯುವತಿಯ ಜೊತೆ ಮದುವೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತ ಯುವಕನೊಬ್ಬ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಸ್ಥಳೀಯ ಆರನೇ ವಾರ್ಡ್ ಯುವಕ ಚಿರಂಜೀವಿ ಗೋಸಂಗಿ (23) ಪಕ್ಕದ ಮನೆಯ ಯುವತಿ ಉಮಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಮನೆಯವರು ಒಪ್ಪಿದ್ದಾರೆ. ಆದರೆ, ಲಾಕ್ ಡೌನ್ನಿಂದ ಮದುವೆಗೆ ವಿಳಂಬವಾಗುತ್ತಿದೆ. ಇದರಿಂದ ಬೇಸತ್ತ ಯುವಕ ಕುಡಿದ ಅಮಲಿನಲ್ಲಿ ಹಳೆಯ ವೀರಭದ್ರೇಶ್ವರ ಟಾಕೀಸ್ ಬಳಿಯ ಏರ್ಟೆಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸ್ಥಳಕ್ಕೆ ಸಿಪಿಐ ವಸಂತ ವಿ ಅಸೋದೆ, ಅಪರಾಧ ವಿಭಾಗದ ಪಿಎಸ್ಐ ಬಿ. ಮೀನಾಕ್ಷಿ, ಸಿಬ್ಬಂದಿ ಮತ್ತು ಸ್ಥಳೀಯರು ಬಂದು ಯುವಕನ ಮನವೊಲಿಸಲು ಯತ್ನಿಸಿದ್ದಾರೆ. ಇನ್ನೊಂದೆಡೆ ಏಳು ಜನ ಯುವಕರ ತಂಡ ಮೊಬೈಲ್ ಟವರ್ ಏರಿ ಅಮಲಿನಲ್ಲಿದ್ದ ಯುವಕನನ್ನು ಕೆಳಗಿಳಿಸಿ ಕರೆತಂದಿದ್ದಾರೆ. ಬಳಿಕ ಯುವಕನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ವೇಳೆ ನೂರಾರು ಜನ ನೆರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.