ಮುದ್ದೇಬಿಹಾಳ: ಆಲಮಟ್ಟಿ ರಸ್ತೆಯಲ್ಲಿ ಗುಂಟಾ ಪ್ಲಾಟುಗಳಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳಿಗೆ ನಿಯಮಾನುಸಾರವಾಗಿ ನೋಟಿಸ್ ಜಾರಿ ಮಾಡಬೇಕು. ಹೆಸ್ಕಾಂ ಅಧಿಕಾರಿಗೆ ಪತ್ರ ಬರೆದು ಅಲ್ಲಿ ವಿದ್ಯುತ್ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯರು ಅಧಿಕಾರಿಗಳಿಗೆ ಒತ್ತಾಯಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಶಿವಪ್ಪ ಹರಿಜನ, ಯಲ್ಲಪ್ಪ ನಾಯ್ಕಮಕ್ಕಳ, ರಿಯಾಜ್ ಢವಳಗಿ, ರಾಜಶೇಖರ ಹೊಳಿ, ಸದಾಶಿವ ಮಾಗಿ, ಅಲ್ಲಾಭಕ್ಷ್ಯ ಢವಳಗಿ, ಪುರಸಭೆ ವ್ಯಾಪ್ತಿಯಲ್ಲಿ ಮನಸೋ ಇಚ್ಛೆ ಅನಧಿಕೃತವಾಗಿ ಕಟ್ಟಡ ಕಟ್ಟುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಏತಕ್ಕೆ ಎಂದು ಹರಿಹಾಯ್ದರು.

ಸದಸ್ಯ ಬಸವರಾಜ ಮುರಾಳ ಮಾತನಾಡಿ, ಕೆಲ ಸಿಬ್ಬಂದಿ ನೋಟಿಸ್ ಭಯ ಒಡ್ಡಿ ಆ ಕಟ್ಟಡಗಳ ಮಾಲೀಕರಿಂದ ಹಣ ಪಡೆದುಕೊಂಡು ಬರುತ್ತಾರೆ. ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲು ಠರಾವು ಪಾಸು ಮಾಡಲು ಒತ್ತಾಯಿಸಿದರು.

ಸದಸ್ಯರಾದ ವೀರೇಶ ಹಡಲಗೇರಿ ಮಾತನಾಡಿ, ಪಟ್ಟಣದ ಶೇ 75 ರಷ್ಟು ವಾಣಿಜ್ಯ ಕಟ್ಟಡಗಳಿಂದ ಸರಿಯಾದ ಆದಾಯ ಪುರಸಭೆಗೆ ಬರುತ್ತಿಲ್ಲ. ಈ ಬಗ್ಗೆ ಸರ್ವೇ ನಡೆಸಿ ವಾರದಲ್ಲಿ ಪಟ್ಟಿ ಸಿದ್ದಪಡಿಸಿ ಅನಧಿಕೃತವಾಗಿರುವ ಕಟ್ಟಡಗಳು ಯಾವುವು ಎಂದು ತಿಳಿಸಿ. ಬಳಿಕ ಸರ್ಕಾರದ ನಿಯಮಾನುಸಾರ ಕೈಗೊಳ್ಳಬೇಕಾದ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರಿಗೆ ಉತಾರೆ ಸಿಗುತ್ತಿಲ್ಲ. ಸಿರಿವಂತರಿಗೆ ಉತಾರೆಗಳನ್ನು ತ್ವರಿತವಾಗಿ ಕೊಡುವ ದಂಧೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡುವಂತೆ ಸದಸ್ಯರು ಆಗ್ರಹಿಸಿದರೂ ಅಧಿಕಾರಿಗಳಿಂದ ಸೂಕ್ತ ಉತ್ತರ ಬರಲಿಲ್ಲ. ತಾಂತ್ರಿಕ ಸಮಸ್ಯೆ ಇರುವ, ಅಭಿವೃದ್ಧಿಯಾಗದೇ ಇರುವ ಲೇಔಟುಗಳಿಗೆ ಸಂಬಂಧಿಸಿದ ಉತಾರೆ ಕೊಡುವುದು ಬೇಡ. ಆದರೆ ಎಲ್ಲ ನಿಯಮಗಳಂತೆ ಸರಿ ಇರುವ ನಿವೇಶನಗಳಿಗೆ ಉತಾರೆ ಪೂರೈಸುವ ಕಾರ್ಯ ಮಾಡುವಂತೆ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಹಂದಿಗಳು ಸಾವನ್ನಪ್ಪುತ್ತಿದ್ದು, ಅವುಗಳ ವಿಲೇವಾರಿಗೆ ಸರಿಯಾದ ಕ್ರಮವನ್ನು ಮಾಲೀಕರು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಹಂದಿಗಳ ಮಾಲೀಕರ ಮೇಲೆಯೇ ಪೊಲೀಸರಿಗೆ ದೂರು ನೀಡುವ ಕಾರ್ಯ ಆಗಬೇಕು ಎಂದು ಸದಸ್ಯರು ಸೂಚಿಸಿದದರು.

ಅಂಗವಿಕಲರಿಗೆ ಟ್ರೈಸಿಕಲ್ ಖರೀದಿಸಿದ್ದು ಅವುಗಳ ವಿತರಣೆಗೆ ದಿನಾಂಕ ನಿಗದಿ ಮಾಡಲು ಸಭೆಯಲ್ಲಿ ಸಮುದಾಯ ಸಂಘಟಕ ವಿನೋದ ಝಿಂಗಾಡೆ ಕೋರಿದರು. ಈ ವೇಳೆ ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಕೆಲವರು ಅನರ್ಹರಿದ್ದು ಪಟ್ಟಿ ಮರುಪರಿಶೀಲನೆ ನಡೆಸಿ ಅರ್ಹರಿಗೆ ಈ ಸೌಲಭ್ಯ ಒದಗಿಸುವಂತೆ ತಿಳಿಸಲಾಯಿತು.

ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಸಗಿ, ಪ್ರಭಾರ ಮುಖ್ಯಾಧಿಕಾರಿ ಉಮೇಶ ಚಲವಾದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.