ಇಂಡಿ: ಇಂಡಿ ಪಟ್ಟಣವನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ, ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಜಗಜೀವನರಾಮ್, ಟಿಪ್ಪುಸುಲ್ತಾನ, ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧ ತಲುಪಿತು.

ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಜಟ್ಟೆಪ್ಪ ರವಳಿ ಮಾತನಾಡಿ, ಈಗಾಗಲೇ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ, ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಶಾಸಕರ ಬೆಂಬಲಾರ್ಥ ಇಂಡಿಯಲ್ಲಿ ಈಗಾಗಲೇ ಹಲವಾರು ಬಾರಿ ಪ್ರತಿಭಟನೆ ನಡೆದಿವೆ. ಅದಲ್ಲದೆ ಇಂಡಿಯಲ್ಲಿ 234ಕ್ಕೂ ಹೆಚ್ಚು ಸಂಘಟನೆಗಳಿದ್ದು, ಅವರೆಲ್ಲರೂ ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದರು.

ಇಂಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ, ಸ್ವಾತಂತ್ರ್ಯದ ನಂತರ ಇಂಡಿ ತಾಲ್ಲೂಕಿನಲ್ಲಿ ನೀರಿಗಾಗಿ ಅನೇಕ ಹೋರಾಟಗಳು ನಡೆದಿವೆ. ಆದರೂ ಇಂಡಿ ತಾಲ್ಲೂಕಿನ ಕೊನೆಯ ಭಾಗದ ವರೆಗೆ ನೀರು ಹರಿಯುತ್ತಿಲ್ಲ. ಹೀಗಾಗಿ ಈಗ ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ, ಹೋರಾಟ ಮಾಡುತ್ತಿದ್ದು, ಹೋರಾಟ ಉಗ್ರ ರೂಪ ತಾಳುವ ಮೊದಲು ಸರ್ಕಾರ ಎಚ್ಚತ್ತುಕೊಂಡು ಜಿಲ್ಲೆ ಮಾಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಪ್ರಶಾಂತ ಕಾಳೆ, ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ, ಹೋರಾಟ ಸಮಿತಿಯ ಉಪಾಧ್ಯಕ್ಷ ಭೀಮಣ್ಣ ಕವಲಗಿ, ತಾ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಬಿ.ಸಿ.ಸಾವಕಾರ, ಇಂಡಿ ಮಹಿಳಾ ಕಾಂಗ್ರೆಸ್ ಸಂಘಟನೆಯ ಅಧ್ಯಕ್ಷೆ ನಿರ್ಮಲಾ ತಳಕೇರಿ, ಧರ್ಮರಾಜ ವಾಲಿಕಾರ ಮಾತನಾಡಿದರು.

ರಾಜು ಪಡಗಾನೂರ, ರಾಜು ಕುಲಕರ್ಣಿ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಸದಾಶಿವ ಪ್ಯಾಟಿ, ಶ್ರೀಕಾಂತ ಕುಡಿಗನೂರ, ಸತ್ತಾರ ಬಾಗವಾನ, ಭೀಮಾಶಂಕರ ಮೂರಮನ, ಮಹಿಬೂಬ ಅರಬ, ಮುನ್ನಾ ಡಾಂಗೆ, ಯಾಕುಬ ಮಾಶ್ಯಾಳಕರ, ರಾಯಿಸ್ ಅಷ್ಟೆಕರ, ಸುನಂದಾ ಬಿರಾದಾರ, ಚಂದ್ರಕಲಾ ಮೇಲಿನಕೇರಿ, ಬೌರಮ್ಮ ಗೌಡತಿ ಬಿರಾದಾರ, ಹರಿಚ್ಚಂದ್ರ ಪವಾರ, ನೀಲಕಂಠ ರೂಗಿ, ಜೆಟ್ಟೆಪ್ಪ ಮರಡಿ, ಲಿಂಬಾಜಿ ರಾಠೋಡ, ಗಿರೀಶ ಚಾಂದಕವಠೆ, ಆಸಿಫ್ ಕಾರಬಾರಿ, ಸತೀಶ ಕುಂಬಾರ, ರುಕ್ಮುದ್ದೀನ ತದ್ದೇವಾಡಿ, ಹುಚ್ಚಪ್ಪ ತಳವಾರ, ಸಿದ್ದಪ್ಪ ಮಾನೆ,ಸುಭಾಸ ಬಾಬರ, ಮಹೇಶ ಹೊನ್ನಬಿಂದಗಿ, ಸಿದ್ದು ಕಟ್ಟೀಮನಿ, ಮೈಬೂಬ ಅರಬ್, ರಮೇಶ ಕಲ್ಯಾಣಿ ಇದ್ದರು. ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.