ವಿಜಯಪುರ: ‘ಸಂಘ ಪರಿವಾರದವರು ‘ವಚನ ದರ್ಶನ’ ಪುಸ್ತಕದ ಮೂಲಕ ನಮ್ಮ ವಚನಗಳನ್ನು ತಿದ್ದಲು ಹೊರಟಿದ್ದಾರೆ. ವಚನಗಳು ನಮ್ಮ(ಲಿಂಗಾಯತ) ಅಸ್ಮಿತೆ. ನಮ್ಮ ಅಸ್ಮಿತೆ ಜೊತೆ ಆಟ ಆಡುವುದು ಬೇಡ’ ಎಂದು ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.
.ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಹೀನ ರಾಜಕಾರಣ: ಎಂ.ಬಿ. ಪಾಟೀಲ ಆರೋಪ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರು ನಮ್ಮ ಅಸ್ಮಿತೆಗಳಾದ ವಚನಗಳ ಬಗ್ಗೆ ಹಸ್ತಕ್ಷೇಪ ಮಾಡುವುದನ್ನು ಬಿಡಬೇಕು. ಇಲ್ಲವಾದರೆ ನಾವು ನಿಮ್ಮ ಸುಳ್ಳು ಅಸ್ಮಿತೆ ಬಿಚ್ಚಿಡುತ್ತೇವೆ. ವೇದ, ಉಪನಿಷತ್ತುಗಳ ಸುಳ್ಳಿನ ಬಗ್ಗೆ ನಾವೂ ಮಾತನಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಆರಂಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು, ಬಳಿಕ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದರು, ಇದೀಗ ಹಿಂದುತ್ವದ ಪರವಾಗಿ ಹೋರಾಟಕ್ಕೆ ದುಮುಕಿದ್ದಾರೆ’ ಎಂದು ಛೇಡಿಸಿದರು.
.ರೈತರ ಒಂದಿಂಚು ಆಸ್ತಿಯೂ ವಕ್ಫ್ ಆಸ್ತಿ ಆಗುವುದಿಲ್ಲ: ಸಚಿವ ಎಂ.ಬಿ. ಪಾಟೀಲ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.