ಇಂಡಿ(ವಿಜಯಪುರ): ತಾಲ್ಲೂಕಿನ ಹಿರೇಮಸಳಿ ಗ್ರಾಮ ಪಂಚಾಯ್ತಿಗೆ ಶನಿವಾರ ಮಧ್ಯಾಹ್ನ ಯುವಕನೊಬ್ಬ ಕುಡಿದು ಬಂದು ರಂಪಾಟ ನಡೆಸಿದ್ದಾನೆ.

ಗ್ರಾಮದ ಸಂತೋಷ ಬಿಜಾಪುರ ಎಂಬಾತ ಕಂಠಪೂರ್ತಿ ಕುಡಿದು, ಅರೆಬೆತ್ತಲೆಯಾಗಿ ಪಂಚಾಯ್ತಿಗೆ ಬಂದು ಕುಡಿಯಲು ನೀರು ಬಿಡುತ್ತಿಲ್ಲ ಎಂದು ಬೀದಿ ರಂಪ ಮಾಡಿದ್ದಾನೆ.

ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯಲು ನೀರು ಬಿಟ್ಟಿಲ್ಲ, ಮನೆಯಲ್ಲಿ ಹನಿ ನೀರಿಲ್ಲ. ನೀರು ಕೇಳಿದರೆ ಬೇಕಾಬಿಟ್ಟಿ ಉತ್ತರ ಕೊಡುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಏನು ಕುಡಿಯುವುದು? ಯಾರಿಗೆ ಹೇಳುವುದು? ಎಂದು ಯುವಕ ಪಂಚಾಯ್ತಿ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾನೆ.

ಕುಡುಕನ ರಂಪಾಟದಿಂದ ಬೇಸತ್ತ ಪಿಡಿಒ ಶೋಭಾ ಹೊರಪೇಟೆ ಕಪಾಳಮೋಕ್ಷ ಮಾಡಿದ್ದಾರೆ. ಕೊನೆಗೆ ಯುವಕನ ಮನೆಯವರು ಬಂದು ಕರೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೆ ಪಂಚಾಯಿತಿಗೆ ಬಂದು ನೀರು ಕೊಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದಿದ್ದಾನೆ. ಸಾರ್ವಜನಿಕರು ಎಷ್ಟೇ ತಿಳಿ ಹೇಳಿದರೂ ಹಠ ಬಿಡದ ಹಿನ್ನೆಲೆಯಲ್ಲಿ ಪೊಲೀಸರನ್ನು ಕರೆಯಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.