ಇಂಡಿ: ಸರಿಯಾದ ಸಮಯಕ್ಕೆ ಬಸ್ಗಳು ಬಾರದ ಕಾರಣ ರಸ್ತೆಗಿಳಿದ ವಿದ್ಯಾರ್ಥಿಗಳು ಶನಿವಾರ ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಪ್ರತಿಭಟನೆ ಮಾಡಿದರು.

ಇಂಡಿಯಿಂದ ವಿಜಯಪುರಕ್ಕೆ ಹಾಗೂ ವಿಜಯಪುರದಿಂದ ಇಂಡಿಗೆ ಹೋಗುವ ಎಲ್ಲ ಬಸ್ಗಳು ತಡವಲಗಾ ಮಾರ್ಗವಾಗಿ ಚಲಾಯಿಸಬೇಕು ಎಂದು ಆದೇಶ ಇದ್ದರೂ ಕೂಡಾ ಬಸ್ ಚಾಲಕರು ಹಾಗೂ ನಿರ್ವಾಹಕರು ಆದೇಶ ಉಲ್ಲಂಘಿಸಿ ತಡವಲಗಾ ಗ್ರಾಮಕ್ಕೆ ಬರದೆ, ಜೋಡಿಗುಡಿಯ ಮೂಲಕ ಇಂಡಿ, ವಿಜಯಪುರಕ್ಕೆ ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಅನಾನುಕೂಲವಾಗುತ್ತಿದೆ.ಹೀಗಾಗಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಇಂಡಿ ಘಟಕ ವ್ಯವಸ್ಥಾಪಕ ಎಸ್.ಜಿ. ಬಿರಾದಾರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಇನ್ನು ಮುಂದೆ ಇಂಡಿ ಹಾಗೂ ವಿಜಯಪುರ ಘಟಕದ ಎಲ್ಲ ಬಸ್ಗಳನ್ನು ತಡವಲಗಾ ಗ್ರಾಮದ ಮಾರ್ಗವಾಗಿ ಚಲಾಯಿಸಲು ಇಂದಿನಿಂದ ಒಂದು ಆದೇಶವನ್ನು ಹೊರಡಿಸಲಾಗುವುದು. ಆದೇಶದ ಪ್ರತಿಯೊಂದನ್ನೂ ಹೊರಡಿಸಿ ಆ ಪ್ರತಿಯನ್ನು ತಮಗೆ ನೀಡಲಾಗುವುದು. ಇನ್ನು ಮುಂದೆಎಂದು ಹೇಳಿದರು.

ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ವಾಲಿಕಾರ ಅವರು ವಿದ್ಯಾರ್ಥಿಗಳಿಗೆ ಸಮಾಧಾನ ಪಡಿಸಿ, ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ನಿಲುಗಡೆಗೆ ಆಗ್ರಹಿಸಿದರು.

ಸಾರಿಗೆ ನಿಯಂತ್ರಕ ಸುರೇಶ ಚನಗೊಂಡ, ಎಲ್. ಆರ್. ರಾಠೋಡ, ಯಲ್ಲಪ್ಪ ಭೀಸೆ ಪಾಲ್ಗೊಂಡಿದ್ದರು.

Quote - ಬಸ್ಸಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಇಂದಿನಿಂದ ಜೋಡಗುಡಿ ಹತ್ತಿರ ಸಾರಿಗೆ ನಿಯಂತ್ರಕರೊಬ್ಬರನ್ನು ನೇಮಿಸಲಾಗಿದೆ ಎಸ್.ಜಿ. ಬಿರಾದಾರ ಇಂಡಿ ಘಟಕ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.