ಸಿಂದಗಿ: ಪಟ್ಟಣದ ಕೋಳಿ ಸಮುದಾಯ ಮಹಿಳೆಯರು ಗುರುವಾರ ಜೋಕುಮಾರನ ಮೂರ್ತಿಯನ್ನು ಹೆಂಡೆಂಡಗಿ ಬುಟ್ಟಿಯಲ್ಲಿ ಕೂಡ್ರಿಸಿ ಸುತ್ತಲೂ ಬೇವಿನ ತಪ್ಪಲು ಇಟ್ಟುಕೊಂಡು ಶಾಂತವೀರ ನಗರದಲ್ಲಿ ಮನೆ ಮನೆಗೆ ತೆರಳಿ 'ಹೋಳಿಗಿ ಬೇಡಿ ಹೊರಳಾಡಿ ಅಳತಾನ ಜೋಕುಮಾರ' ಎಂಬ ಜೊಕುಮಾರನ ಗುಣಗಾನದ ಹಾಡು ಹಾಡಿದರು. ನಂತರ ಮನೆಯವರು ಜೋಳ ಉಪ್ಪು ದಕ್ಷಿಣೆ ಹಣ ನೀಡಿ ಆಶೀರ್ವಾದ ಪಡೆದುಕೊಳ್ಳುವುದು ಕಂಡು ಬಂದಿತು. ಸೆಪ್ಟಂಬರ್ 29 ರಂದು ಅನಂತನ ಹುಣ್ಣಿಮೆ ದಿನ ಜೋಕುಮಾರನ ತಲೆ ಒಡೆಯುವ ಕಾರ್ಯ ನಡೆಯುತ್ತದೆ ಎಂದು ಜೋಕುಮಾರನ ಮೂರ್ತಿ ಹೊತ್ತುಕೊಂಡಿರುವ ಮಹಿಳೆ ನೀಲಗಂಗವ್ವ ಕಡಕೋಳ ಪ್ರತಿಕ್ರಿಯಿಸಿದರು. ನಾಗಮ್ಮ ಚಂದಾ ಶಾಂತವ್ವ ಕಡಕೋಳ ಸಾಬವ್ವ ಕಕ್ಕಳಮೇಲಿ ಇದ್ದರು.