ವಿಜಯಪುರ: ಭಾರತದ ಪರಂಪರೆ ಸಂಸ್ಕೃತಿ, ಆಚಾರ, ವಿಚಾರವನ್ನು ತಮ್ಮ ಅಮೋಘವಾದ ಚಿಂತನೆಗಳಿಂದ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ಬದುಕಿದ್ದು, ತಮ್ಮ ಜ್ಞಾನಾತ್ಮಕ ವ್ಯಕ್ತಿತ್ವದಿಂದ ಸೂರ್ಯ ಚಂದ್ರ ಇರುವರಿಗೂ ಅಜರಾಮರಾಗಿದ್ದಾರೆ. ವಿಶ್ವದ ಸರ್ವಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದರು ಎಂದು ಸಾಹಿತಿ ಪ್ರೊ.ಎ.ಎಚ್. ಕೊಳಮೇಲಿ ಹೇಳಿದರು.

ನಗರದ ಕುಮಾರಿ ಮೋನಿಕಾ ಬಸವರಾಜ ಕಣ್ಣಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಪೌಂಡೇಶನ್ ವತಿಯಿಂದ ಮನ-ಮನಕ್ಕೂ ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತ ಪುಸ್ತಕ ವಿತರಣಾ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ದೇಶದ ಅದ್ಭುತವಾದ ಶಕ್ತಿ. ಚಿಕ್ಯಾಗೊ ಸರ್ವಧರ್ಮ ಸಮ್ಮೆಳನದಲ್ಲಿ ಭಾಷಣ ಮಾಡಿದ ಅವರು ತಮ್ಮ ವಾಕ್ ಚಾತುರತೆಯಿಂದ ವಿಶ್ವದ ಮಹಾಮೇಧಾವಿ ಏನಿಸಿದರು. ಸಾಧಕರಿಗೆ, ಯುವಕರಿಗೆ ಸ್ವಾಮಿ ವಿವೇಕಾನಂದರು ಪ್ರೇರಣೆ ಎಂದರು.

ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನದ ಅಧ್ಯಕ್ಷ ಸುನೀಲ ಜೈನಾಪೂರ ಮಾತನಾಡಿ, ಸದಾ ಸಮಾಜಪರ ಕೆಲಸ ಮಾಡುವ ನಗರದ ಏಕೈಕ ಸಂಘಟನೆ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ. ಸದಾ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಯುವಕರಲ್ಲಿ ರಾಷ್ಟ್ರಜಾಗೃತಿ ಮತ್ತು ದೇಶಾಭಿಮಾನವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕುಮಾರಿ ಮೋನಿಕಾ ಕಣ್ಣಿ ಕಾಲೇಜಿನ ಅಧ್ಯಕ್ಷ ಬಸವರಾಜ ಕಣ್ಣಿ, ಪ್ರಾಚಾರ್ಯ ರಾಮಚಂದ್ರ ಮೋರೆ, ಸುರೇಶ ಜತ್ತಿ, ಸಂತೋಷ ಹೆಗಡೆ, ಜಗದೀಶ ಮನಗೂಳಿ, ಅನಿಲ ಮುಳಸಾವಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.