ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಕುಟುಂಬ ಸಮೇತ ನಗರದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಕೊಠಡಿ ನಂ.5ರ ಎದುರು ಸರತಿ ಸಾಲಿನಲ್ಲಿ ನಿಂತು ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ಅವರೊಂದಿಗೆ ಮತ ಚಲಾಯಿಸಿದರು.

ದೇಶದ ಸುರಕ್ಷತೆ, ಸನಾತನ ಧರ್ಮ ಉಳಿಸಲು ಹಾಗೂ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಆದಷ್ಟು ಬೇಗ, ತಪ್ಪದೆ ಮತ ಕೇಂದ್ರಕ್ಕೆ ತೆರಳಿ, ಮತಯಾಚನೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಕೈ ಜೋಡಿಸಲು ವಿನಂತಿಸಿಕೊಂಡರು.

ರಾಜ್ಯದ ಎಲ್ಲಾ 14 ಕ್ಷೇತ್ರಗಳಲ್ಲಿಯೂ ಉತ್ತಮ ವಾತಾವರಣವಿದೆ. ನಮ್ಮಗೆಲುವು ನಿಶ್ಚಿತ. ಮತದಾನ ಪ್ರಮಾಣ ಹೆಚ್ಚಾದಂತೆ ನಮ್ಮ ಗೆಲುವಿನ ಅಂತರ ಹೆಚ್ಚುತ್ತದೆ. ವಿಜಯಪುರ ನಗರದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ನೋಡಿ ಖುಷಿ ಆಯ್ತು ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.