ಸಿಂದಗಿ: ಕೇಂದ್ರ ಸರ್ಕಾರ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ದೇಶದಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಠ 75 ಕೆರೆಗಳ ನಿರ್ಮಾಣ ಇಲ್ಲವೇ ಅಭಿವೃದ್ಧಿಪಡಿಸುವ ವಿನೂತನ ಯೋಜನೆಯೊಂದಿಗೆ ‘ಅಮೃತ ಸರೋವರ’ ಅನುಷ್ಠಾನಕ್ಕೆ ತರಲಾಗಿದೆ.

ಈ ಯೋಜನೆಯಡಿ ಸಿಂದಗಿ ತಾಲ್ಲೂಕಿಗೆ ಏಳು ಕೆರೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ.

ಬಂದಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓತಿಹಾಳ ಗ್ರಾಮದಲ್ಲಿ ಕಣ್ಮನ ಸೆಳೆಯುವ ರೀತಿಯಲ್ಲಿ ಕೆರೆ ಅಭಿವೃದ್ಧಿ ಪೂರ್ಣಗೊಂಡಿದೆ. ಗುಬ್ಬೇವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಪುರದಾಳ ಕೆರೆ ಕಾಮಗಾರಿಯೂ ಪೂರ್ಣಗೊಂಡಿದೆ.

ರಾಂಪುರ ಪಿ.ಎ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಂಪುರ ಪಿ.ಎ ಗ್ರಾಮ, ಚಟ್ಟರಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚಟ್ಟರಕಿ ಗ್ರಾಮ, ಯಂಕಂಚಿ ಗ್ರಾಮ ಪಂಚಾಯ್ತಿಯಲ್ಲಿ ಯಂಕಂಚಿ ಗ್ರಾಮ, ಕೊಕಟನೂರ ಗ್ರಾಮ ಪಂಚಾಯ್ತಿಯಲ್ಲಿ ಕೊಕಟನೂರು ಗ್ರಾಮಗಳಲ್ಲಿ ಕೆರೆ ಕಾಮಗಾರಿ ಪ್ರಗತಿಯಲ್ಲಿದೆ. ಕೊಕಟನೂರು ಕೆರೆಯನ್ನು ಕೃಷಿ ಇಲಾಖೆ ನಡೆಸುತ್ತಿದೆ.

ಆದರೆ ಹಿಕ್ಕನಗುತ್ತಿ ಗ್ರಾಮ ಪಂಚಾಯ್ತಿಯಲ್ಲಿನ ಬಬಲೇಶ್ವರ ಗ್ರಾಮದಲ್ಲಿ ವಿಸ್ತಾರವಾದ ಕೆರೆ ಇದೆ. ಇದಕ್ಕೆ ಪೂರಕವಾಗಿ ಅಮೃತ ಸರೋವರ ಕೆರೆ ಕಾಮಗಾರಿ ನಡೆಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಕೆಲವರು ಪರ, ಇನ್ನು ಕೆಲವರು ವಿರೋಧ ಮಾಡುತ್ತಿದ್ದ ಕಾರಣ ತಿಕ್ಕಾಟದಲ್ಲಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಾಂಪುರ ಪಿ.ಎ ಕೆರೆಗೆ ವೆಚ್ಚ ₹ 20 ಲಕ್ಷ, ಉಳಿದೆಲ್ಲ ಕೆರೆಗಳ ಅಭಿವೃದ್ದಿಗೆ ₹ 30 ಲಕ್ಷ ಅನುದಾನ ಕಾಯ್ದಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನರೇಗಾ ಯೋಜನೆಯ ಅಡಿ ಇನ್ನೂ ಗ್ರಾಮಗಳನ್ನು ಹೆಚ್ಚಿಸಿ ಇಂಥ ಅಮೃತ ಸರೋವರ ಕೆರೆಗಳು ಅಭಿವೃದ್ಧಿಗೊಂಡರೆ ನೀರಿನ ಸಮಸ್ಯೆಗೆ ಪರಿಹಾರ ದೊರಕಬಹುದು ಎಂದು ಲಿಂಬೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಪ್ರತಿಕ್ರಿಯಿಸಿದ್ದಾರೆ.

ಅಮೃತ ಸರೋವರ ಯೋಜನೆಯ ಅಡಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಲು ತುಂಬಾ ಅನುಕೂಲವಾಗಿದೆ
ನಿತ್ಯಾನಂದ ಯಲಗೋಡ ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

ಕೆರೆ ಅಭಿವೃದ್ಧಿಯಾದರೆ ಅಂತರ್ಜಲ ವೃದ್ಧಿ ಕೆರೆಗಳನ್ನು ಅಮೃತ ಸರೋವರಗಳನ್ನಾಗಿ ಅಭಿವೃದ್ಧಿ ಪಡಿಸುವುದರಿಂದ ಗ್ರಾಮಗಳಲ್ಲಿಯ ಕೊಳವೆ ಬಾವಿ ತೆರೆದಬಾವಿಗಳ ನೀರಿನ ಮಟ್ಟ ಏರಿಕೆಯಾಗುತ್ತದೆ. ಗ್ರಾಮಕ್ಕೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುತ್ತದೆ. ರಾಮು ಜಿ. ಅಗ್ನಿ ತಾಲ್ಲೂಕು ಪಂಚಾಯ್ತಿ ಇಒ ಸಿಂದಗಿ ನೀರಿನ ತೊಂದರೆ ದೂರ ಪ್ರತಿ ವರ್ಷ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಖಾಲಿಯಾಗುತ್ತಿತ್ತು. ಆದರೆ ಕಳೆದ ವರ್ಷ ಕೆರೆ ಅಭಿವೃದ್ಧಿಗೊಂಡು ಅಮೃತ ಸರೋವರವಾಗಿ ನಿರ್ಮಾಣಗೊಂಡಿದ್ದರಿಂದ ಗ್ರಾಮದಲ್ಲಿ ನೀರಿನ ತೊಂದರೆ ದೂರವಾಗಿದೆ. ಕೇಶಪ್ಪ ಮಕಣಾಪುರ ಗ್ರಾಮಸ್ಥ ಓತಿಹಾಳ ಗ್ರಾಮ

ಅಂಕಿ–ಅಂಶ ಕೆರೆ;ಮಾನವ ದಿನಗಳು ಓತಿಹಾಳ ಕೆರೆ;1746 ಪುರದಾಳ ಕೆರೆ;882 ಬಬಲೇಶ್ವರ ಕೆರೆ;2342 ರಾಂಪುರ ಕೆರೆ;1018 ಚಟ್ಟರಕಿ ಕೆರೆ;1048 ಯಂಕಂಚಿ ಕೆರೆ:922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.