ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯತ್ತ ಮುಖ ಮಾಡಿದಾಗ ಆರಂಭದಲ್ಲಿ ಉತ್ತಮ ಬೆಲೆ ಸಿಕ್ಕಿತ್ತು. ಆದರೆ, ಎರಡ್ಮೂರು ವರ್ಷದಿಂದ ಬೆಲೆ ಕುಸಿತ ಹಾಗೂ ಉತ್ಪನ್ನ ದುಬಾರಿಯಾಗಿ ಪರಿಣಮಿಸಿದ್ದರಿಂದ ರೈತ ಸಮುದಾಯ ಮತ್ತೆ ಸಂಕಷ್ಟದ ಹಾದಿಯನ್ನು ಎದುರಿಸುವಂತಾಗಿದೆ.

ಪ್ರಸಕ್ತ ಬಾರಿ ಆರಂಭದಲ್ಲಿ ಉತ್ತಮ ಮಳೆಯಾಗಿ ನಂತರ ಜೂನ್ ತಿಂಗಳಲ್ಲಿ ಮಳೆರಾಯ ಕೈಕೊಟ್ಟಾಗ ಆಗ ಹತ್ತಿ ಬೆಳವಣಿಗೆ ತುಸು ಏರುಪೇರಾಯಿತು. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಯಿತು. ಸದ್ಯ ಹತ್ತಿ ಮಾರುಕಟ್ಟೆಗೆ ಆಗಮಿಸಿದೆ. ಪ್ರತಿ ಕ್ವಿಂಟಲ್ ಹತ್ತಿ ಬೆಲೆ ₹6 ಸಾವಿರದಿಂದ 7 ಸಾವಿರ ಆಸುಪಾಸಿನಲ್ಲಿದೆ.

ಕೂಲಿ ಕೆಲಸ, ಕಾರ್ಮಿಕರ ಕೂಲಿ ಹಣ ಹೆಚ್ಚಾಗಿದ್ದು, ಕ್ರಿಮಿನಾಶಕ, ರಸಗೊಬ್ಬರದ ದರ ಗಗನಕ್ಕೇರಿದೆ. ಇಷ್ಟೆಲ್ಲಾ ಸಮಸ್ಯೆ ಎದುರಿಸಿ ಬೆಳೆ ತೆಗೆದರೆ ಖರ್ಚು ಮಾಡಿದಷ್ಟು ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು ರೈತರದ್ದು.

‘ಎಕರೆಗೆ ₹10 ಸಾವಿರದಿಂದ 15 ಸಾವಿರ ವೆಚ್ಚ ಮಾಡಿದ್ದೇವೆ. ಲಾಭಾಂಶ ಕಡಿಮೆಯಾಗಿದೆ. ಮುಂದೇನು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ’ ಎನ್ನುತ್ತಾರೆ ರೈತ ಶಿವಪ್ಪ.

‘ಕ್ವಿಂಟಲ್ಗೆ ₹10 ಸಾವಿರ ಬೆಲೆ ರೈತರಿಗೆ ಸಿಗಬೇಕು. ಸಧ್ಯ ಭಾರತ ಹತ್ತಿ ನಿಗಮದವರು ನಿಗದಿ ಮಾಡಿರುವ ದರ ₹7,520. ರೈತರು ಸಂಕಷ್ಟಕ್ಕೆ ಒಳಗಾವುವ ಮೊದಲೇ ಹತ್ತಿ ನಿಗಮದವರು ರೈತರು ಬೆಳೆದ ಹತ್ತಿಯನ್ನು ತಮ್ಮ ದರದಲ್ಲಿ ಖರೀದಿ ಮಾಡಬೇಕು’ ಎಂದು ಪ್ರಗತಿ ಪರ ರೈತ ಅಶೋಕ ಮಲ್ಲಾಬಾದಿ ಆಗ್ರಹಿಸುತ್ತಾರೆ.

ಬೆಲೆ ನಿಯಂತ್ರಣಕ್ಕಾಗಿ ಭಾರತೀಯ ಹತ್ತಿ ನಿಗಮವು ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತವು ಗಮನಹರಿಸುತ್ತಿಲ್ಲ. ಅನಿವಾರ್ಯವಾಗಿ ಸಿಕ್ಕಷ್ಟು ಸೀರುಂಡೆ ಎನ್ನುವಂತೆ ಹತ್ತಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದೇವೆ. ಒಮ್ಮೆ ಹತ್ತಿ ಬಿಡಿಸಿದ ಮೇಲೆ ಇನ್ನೊಂದು ಬಾರಿ ಹತ್ತಿ ಕೈಗೆ ಬರುತ್ತದೆ ಎಂಬ ಭರವಸೆಯೂ ಕಡಿಮೆಯಾಗಿದೆ. ರೋಗ ರುಜಿನ ಕಾಣಿಸಿಕೊಳ್ಳುತ್ತಲಿವೆ. ಅನಿವಾರ್ಯವಾಗಿ ಮತ್ತೆ ಬೇಸಿಗೆ ಹಂಗಾಮಿನ ಬೆಳೆಯನ್ನಾಗಿ ಶೇಂಗಾ, ಸಜ್ಜೆ ಬೆಳೆ ಬಿತ್ತನೆ ಮಾಡಬೇಕು ಎಂಬ ಚಿಂತನೆ ಹತ್ತಿ ಬೆಳೆಗಾರರದು.

‘ಹಲವಾರು ವರ್ಷದಿಂದ ಕೋಟ್ಯಂತರ ರೂಪಾಯಿ ಹತ್ತಿ ಬೆಳೆ ವಹಿವಾಟು ನಡೆಯುತ್ತಿದ್ದರೂ ಖರೀದಿ ಕೇಂದ್ರವಿಲ್ಲ. ನೆರೆ ರಾಯಚೂರು ಹಾಗೂ ಇನ್ನಿತರ ಜಿಲ್ಲೆಯ ಕಡೆ ನಾವು ಮುಖ ಮಾಡುತ್ತಿದ್ದೇವೆ. ಅಲ್ಲದೆ ಜಿಲ್ಲೆಯ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ವ್ಯಾಪ್ತಿಯಲ್ಲಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸಿ ರೈತರಿಗೆ ವೈಜ್ಞಾನಿಕವಾಗಿ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ತರುವ ಬಗ್ಗೆ ತರಬೇತಿ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ’ ಎಂದು ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.

‘ಕೃಷಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಂದರೂ ಹತ್ತಿ ಕೀಳುವ ಯಂತ್ರ ಮಾತ್ರ ಬಂದಿಲ್ಲ. ಹತ್ತಿ ಕೀಳಲು ಮಾನವ ಶಕ್ತಿಯನ್ನು ಉಪಯೋಗಿಸುವಂತೆ ಆಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ಹಾಗೂ ಕೂಲಿ ಕಾರ್ಮಿಕರು ಹತ್ತಿ ಕೀಳುವ ಕಾರ್ಯದಲ್ಲಿ ಕಾಣುತ್ತೇವೆ. ಹತ್ತಿ ಕೀಳುವುದಕ್ಕಾಗಿ ಹೆಚ್ಚಿನ ಕೂಲಿ ಹಣ ನೀಡುವಂತೆ ಆಗಿದೆ’ ಎನ್ನುತ್ತಾರೆ ರೈತರು.

'ಸರ್ಕಾರ ತಕ್ಷಣ ಹತ್ತಿ ಖರೀದಿ ಕೇಂದ್ರ ಆರಂಭಿಸಿ ನಿಯಮ ಸರಳೀಕರಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಪ್ರಗತಿಪರ ರೈತ ಮಲ್ಲಯ್ಯ ಕಮತಗಿ ಆಗ್ರಹಿಸುತ್ತಾರೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್

ಅಕಾಲಿಕವಾಗಿ ಬಂದ ಮಳೆಯಿಂದ ಹತ್ತಿಯು ಕಪ್ಪುಬಣ್ಣಕ್ಕೆ ತಿರುಗಿರುವುದರಿಂದ ಬೆಲೆಯೂ ಕಡಿಮೆ ಆಗಿದೆ. ಸರ್ಕಾರ ಹತ್ತಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ಹಿತ ಕಾಪಾಡಬೇಕು
ಶಿವಕುಮಾರ ಕೊಂಕಲ್ ಪ್ರಗತಿಪರ ರೈತ

ಹತ್ತಿ ಇಳುವರಿ ಕಡಿಮೆಯಿದೆ. ಬೆಲೆಯೂ ಕಡಿಮೆಯಿದೆ. ರೈತರ ಕೈಹಿಡಿಯಲು ಹತ್ತಿಗೆ ಕನಿಷ್ಠ ₹12 ಸಾವಿರ ಬೆಂಬಲ ಬೆಲೆ ಘೋಷಿಸಲಿ ಭೀ
ಮರಾಯ ವೆಂಕಟರಾಯನೋರ ರೈತ ಮುಖಂಡ

6 ಎಕರೆಯಲ್ಲಿ ಹತ್ತಿ ನಾಟಿ ಮಾಡಿದ್ದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಳುವರಿಯಲ್ಲಿ ಈಗ ಕನಿಷ್ಠ ಶೇ 40ರಷ್ಟು ಇಳಿಕೆಯಾಗಿದೆ
ರಮೇಶ ರಾಠೋಡ ಚಿಂತನಹಳ್ಳಿ ರೈತ

ಹತ್ತಿ ಬೆಳೆಗೆ ರೈತರು ಈಗಾಗಲೇ ಸಾಕಷ್ಟು ಖರ್ಚು ಮಾಡಿರುವುದರಿಂದ ಹಣಕಾಸಿನ ತೊಂದರೆಯಿಂದ ಮಾರಾಟ ಮಾಡಲು ಹೋದರೆ ವ್ಯಾಪಾರಿಗಳು ಹೇಳಿದಷ್ಟು ಕೊಡುವ ಪರಿಸ್ಥಿತಿ ಬಂದಿದೆ ಅ
ಶೋಕ ಮಲ್ಲಾಬಾದಿ ಪ್ರಗತಿ ಪರ ರೈತ

ಶಹಾಪುರ ವಡಗೇರಾದಲ್ಲಿ ಶೇ 100ರಷ್ಟು ಬಿತ್ತನೆ

2024–25 ಸಾಲಿನಲ್ಲಿ ಜಿಲ್ಲೆಯಲ್ಲಿ 186296.65 ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಇದ್ದು 166662 ಹೆಕ್ಟೇರ್ ಬಿತ್ತನೆಯಾಗಿದೆ. ಜಿಲ್ಲೆಯ ಶಹಾಪುರ ವಡಗೇರಾ ತಾಲ್ಲೂಕಿನಲ್ಲಿ ಶೇ 100ರಷ್ಟು ಹತ್ತಿ ಬಿತ್ತನೆಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 38798 ಹೆಕ್ಟೇರ್ ವಡಗೇರಾ ತಾಲ್ಲೂಕಿನಲ್ಲಿ 26798.93 ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಇದ್ದು ಅಷ್ಟೇ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಸುರಪುರ ಶೇ 96.27 ಹುಣಸಗಿ ಶೇ 60.39 ಯಾದಗಿರಿ ಶೇ 86.76 ಗುರುಮಠಕಲ್ ಶೇ 84.52 ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಶೇ 89.46 ರಷ್ಟು ಹತ್ತಿ ಬಿತ್ತನೆಯಾಗಿದೆ.

‘ಪರ್ಯಾಯ ಬೆಳೆಯತ್ತ ಮುಖ ಮಾಡಲಿ’

ಶಹಾಪುರ: ರೈತರು ಹಲವಾರು ವರ್ಷದಿಂದ ಏಕರೂಪದ ಹತ್ತಿಯನ್ನು ಬೆಳೆಯುತ್ತಿರುವುದರಿಂದ ಇಳುವರಿ ಕುಂಠಿತಗೊಂಡಿದೆ. ಇದರಿಂದ ಶಹಾಪುರ ತಾಲ್ಲೂಕಿನ ಮುಡಬೂಳ ಮದ್ರಿಕಿ ಶಿರವಾಳ ಅಣಬಿ ಹೀಗೆ ಹಲವಾರು ಗ್ರಾಮದ ಬಳಿ ಕಪ್ಪು ಮಿಶ್ರಿತ ಜಮೀನುಗಳಲ್ಲಿ ಸವಳು ಹಾಗೂ ಜವಳು ಆವರಿಸಿ ಇಳುವರಿ ಕುಸಿತವಾಗಿದೆ. ರೈತರು ಏಕರೂಪದ ಬೆಳೆ ಬೆಳೆಯುವುದರಿಂದ ಜಮೀನುಗಳಲ್ಲಿ ಸತ್ವ ಕಡಿಮೆಯಾಗಿದೆ.

ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಬೇಕು ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕೃಷಿ ವಿಜ್ಞಾನಿಗಳು ಸಲಹೆ ನೀಡುತ್ತಾರೆ. ಹತ್ತಿ ಬೀಜ ಕಂಪನಿ ಮೇಲೆ ಅವಲಂಬನೆ: ‘ರೈತರು ಹತ್ತಿ ಬೀಜವನ್ನು ಪಡೆಯಲು ಕಂಪನಿಗಳ ಮೇಲೆ ಅವಲಂಬಿತರಾಗಿದ್ದಾರೆ.

ಸ್ವಂತ ಬಿತ್ತನೆ ಬೀಜ ಸಿದ್ಧಪಡಿಸಿಕೊಂಡು ಬಿತ್ತನೆ ಮಾಡುವ ಕಾಲ ಈಗ ಮುಗಿದು ಹೋಗಿದೆ. ಇದರಿಂದ ಬೀಜದ ಶಕ್ತಿಯು ಕುಂದುತ್ತಾ ಬಂದಿದೆ. ಇಳುವರಿ ಕಡಿಮೆ ಬೆಲೆ ಕುಸಿತ ದುಬಾರಿ ಬೀಜ ಖರೀದಿಯಿಂದ ರೈತರು ವಾಣಿಜ್ಯ ಬೆಳೆಯಿಂದ ವಿಮುಖರಾಗುವ ಕಾಲ ಸನ್ನಿಹಿತವಾಗಿದೆ’ ಎನ್ನುತ್ತಾರೆ ರೈತ ಶರಣಪ್ಪ.

ಶೋಕ ಮಲ್ಲಾಬಾದಿ ಪ್ರಗತಿ ಪರ ರೈತ

ರೈತರ ಮುಖದಲ್ಲಿ ಕರಾಳ ಛಾಯೆ ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ ಕೊನೆ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಹತ್ತಿ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿ ರೈತರ ಮುಖದಲ್ಲಿ ಕರಾಳ ಛಾಯೆ ಆವರಿಸಿದೆ. ಸಾಲ ಸೋಲ ಮಾಡಿ ದುಬಾರಿ ಬೆಲೆಯ ಹತ್ತಿ ಬೀಜಗಳನ್ನು ದೂರದ ಆದೋನಿ ಹಾಗೂ ಇನ್ನಿತರ ಪ್ರದೇಶಗಳಿಂದ ತಂದು ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರು.

ಮೊದ ಮೊದಲು ಸಕಾಲದಲ್ಲಿ ಮಳೆ ಬಂದ ಕಾರಣ ಇಳುವರಿಯು ಉತ್ತಮವಾಗಿ ಬರುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಅಕಾಲಿಕವಾಗಿ ಬಂದ ಮಳೆ ರೈತರ ಮುಖದಲ್ಲಿ ಇದ್ದ ಮಂದಹಾಸವನ್ನು ಮಾಯ ಮಾಡಿತು. ಹತ್ತಿ ಬೆಲೆ ಕ್ವಿಂಟಲ್ಗೆ ₹6500 ರಿಂದ ₹7500 ಇರುವುದರಿಂದ ರೈತರು ಆತಂಕದಲ್ಲಿ ಇದ್ದು ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ಇದ್ದಾರೆ.

ರೈತರು ತುಂಬಾ ಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ₹10 ಸಾವಿರ ದರ ನಿಗದಿ ಪಡಿಸುವಂತೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ ತಡಿಬಿಡಿ ಆಗ್ರಹಿಸಿದ್ದಾರೆ.

ಗುರುಮಠಕಲ್: ಇಲ್ಲ ಹತ್ತಿ ಖರೀದಿ ಕೇಂದ್ರ

ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಮತ್ತು ತಾಂಡಾ ಕಂದಕೂರು ಎಲ್ಹೇರಿ ಇಡ್ಲೂರು ಧರ್ಮಪುರ ಕೊಂಕಲ್ ಚಿನ್ನಾಕಾರ ಕಳಬೆಳಗುಂದಿ ಮಾಧ್ವಾರ ಜೈಗ್ರಾಮ ನಂದೇಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹತ್ತಿ ಬೆಳೆಯಿದೆ. ಆದರೆ ಖರೀದಿ ಕೇಂದ್ರವಿಲ್ಲ. ಹತ್ತಿ ಮಾರಾಟಕ್ಕೆ ಯಾದಗಿರಿ ನಗರದ ಖರೀದಿ ಕೇಂದ್ರಕ್ಕೆ ಹೋಗಬೇಕು.

ಇಲ್ಲಿ ಕಾಟನ್ ಮಿಲ್ ಇಲ್ಲದ್ದರಿಂದ ಖರೀದಿ ಕೇಂದ್ರವೂ ಇಲ್ಲ. ಇದರಿಂದ ರೈತರಿಗೆ ಬಿಡಿಸಿದ ಹತ್ತಿ ಮಾರಾಟಕ್ಕೆ ಯಾದಗಿರಿಗೆ ಹೋಗುವುದು ಅನಿವಾರ್ಯವಾಗಿದೆ ಎಂದು ರೈತರು ತಿಳಿಸಿದರು. ‘ಸತತ ಮಳೆಯಿಂದ ಇಳುವರಿ ಕುಂಠಿತವಾಗಿದೆ. ಕಾಯಿ ಉದುರುವುದು ಸಸಿ ಬೇರು ಕೊಳೆತದಿಂದ ಇಳುವರಿಯಲ್ಲಿ ಇಳಿಕೆಯಾಗಿದೆ. ಆದರೆ ಬೆಲೆ ಮಾತ್ರ ಏರಿಲ್ಲ’ ಎಂದು ರೈತ ಬನ್ನಪ್ಪ ಹೇಳಿದರು.

‘ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಹತ್ತಿ ಕನಿಷ್ಠ ₹5500 ರಿಂದ ಗರಿಷ್ಠ ₹7500 ವರೆಗೆ ಮಾರಾಟವಾಗುತ್ತಿದೆ. ಹತ್ತಿ ಬೆಳೆಗೆ ಖರ್ಚಾದ ಹಣಕ್ಕೆ ಹೋಲಿಸಿದರೆ ರೈತರ ಬಾಳು ಸಂಕಷ್ಟಕ್ಕೀಡಾಗಿದ್ದರ ಅರಿವಾಗುತ್ತೆ’ ಎಂದು ಬೆಳೆಗಾರ ರಮೇಶ ಅಲವತ್ತುಕೊಂಡರು.

ಇಳುವರಿಯಲ್ಲಿ ಗಣನೀಯ ಕುಸಿತ

ಹುಣಸಗಿ: ತಾಲ್ಲೂಕಿನಲ್ಲಿ ಹತ್ತಿ ಬೆಳೆ ಅತ್ಯಂತ ಕಡಿಮೆ ಕ್ಷೇತ್ರ ಹೊಂದಿದ್ದು ಬಹುತೇಕ ಪ್ರಮುಖ ಬೆಳೆಯಾಗಿ ಭತ್ತವನ್ನೇ ಬೆಳೆಯಲಾಗುತ್ತದೆ. ಆದರೆ ಗುಂಡಲಗೇರಾ ಅಗ್ನಿ ಅರಕೇರಾ ಜೆ ಮುದನೂರು ಅಮಲಿಹಾಳ ಕರಿಬಾವಿ ಶ್ರೀನಿವಾಸಪುರ ಕೊಡೇಕಲ್ಲ ಬರದೇವನಾಳ ಸೇರಿದಂತೆ ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗಿದೆ.

ಪೂರ್ವ ಮುಂಗಾರಿನಲ್ಲಿ ಹತ್ತಿ ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ತೊಂದರೆ ಅನುಭವಿಸಿದ್ದು ಇಳುವರಿ ಅತ್ಯಂತ ಕಡಿಮೆ ಬಂದಿದೆ. ಅಲ್ಲದೆ ದರ ಹೇಳಿಕೊಳ್ಳುವಂತಿಲ್ಲ ಎಂದು ನೋವು ತೋಡಿಕೊಂಡರು. ‘ಕಳೆದ ವರ್ಷ ಎಕರೆಗೆ 6 ರಿಂದ 8 ಕ್ವಿಂಟಲ್ ವರೆಗೆ ಇಳುವರಿ ಬಂದಿತ್ತು. ಸದ್ಯ 3 ಕ್ವಿಂಟಲ್ ಮಾತ್ರ ಬರುತ್ತಿದೆ. ಶನಿವಾರ (ಅ.26ರಂದು) ಕ್ವಿಂಟಲ್ ಹತ್ತಿಗೆ ₹7000 ದಿಂದ ₹7100 ವರೆಗೆ ಮಾರಾಟ ಮಾಡಿದ್ದೇನೆ’ ಎಂದು ಕಲ್ಲದೇವನಹಳ್ಳಿ ಗ್ರಾಮದ ರೈತ ವಿಶ್ವನಾಥ ತಿಳಿಸಿದರು.

‘ತಡವಾಗಿ ಬಿತ್ತನೆ ಮಾಡಿದ ಹತ್ತಿ ಇನ್ನೂ ಒಂದು ವಾರದಲ್ಲಿ ಬಿಡಿಸಲು ಅಣಿಯಾಗುತ್ತಿದ್ದು ಇಳುವರಿಯಲ್ಲಿ ಸ್ವಲ್ಪ ಚೇತರಿಕೆ ಕಾಣಿಸುವ ನಿರೀಕ್ಷೆ ಇದ್ದು ನಮಗೆ ನಷ್ಟ ಮಾತ್ರ ಕಟ್ಟಿಟ್ಟ ಬುತ್ತಿ’ ಎಂದು ಮಂಜಲಾಪುರ ಹಳ್ಳಿ ರೈತ ಪರಮಣ್ಣ ನೀಲಗಲ್ ತಿಳಿಸಿದರು.

‘ಹತ್ತಿ ಖರೀದಿ ಕೇಂದ್ರ ಆರಂಭಿಸಿ’

ಸುರಪುರ: ಹತ್ತಿ ಬೆಳೆಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ₹7520 ನಿಗದಿ ಮಾಡಿದೆ. ಆದರೆ ಖರೀದಿ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ₹7 ಸಾವಿರದಿಂದ ₹7300 ವರೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ಭತ್ತದ ನಂತರ ಹತ್ತಿ ಬೆಳೆಯನ್ನು ಅತಿ ಹೆಚ್ಚು ಅಂದಾಜು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅನಾವೃಷ್ಟಿಯಿಂದ ಕೆಂಪು ಭೂಮಿಯಲ್ಲಿ ಬೆಳೆದ ಹತ್ತಿ ನಾಶವಾಗಿದೆ. ಕಪ್ಪು ಭೂಮಿಯ ಹತ್ತಿ ಪರವಾಗಿಲ್ಲ ಎನ್ನುವಂತಿದೆ. ಒಂದು ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಬರುತ್ತಿದೆ.

ಎಕರೆಗೆ ₹ 35 ಸಾವಿರ ಖರ್ಚು ತಗಲುತ್ತಿದೆ. ಉತ್ತಮ ಬೆಲೆ ದೊರೆತರೆ ರೈತರಿಗೆ ಅನುಕೂಲವಾಗುತ್ತದೆ. ತಾಲ್ಲೂಕಿನ ಹದನೂರ ಮತ್ತು ಸುರಪುರದಲ್ಲಿ ಹತ್ತಿ ಕಾರ್ಖಾನೆ ಇವೆ. ಮಾರುಕಟ್ಟೆ ಸಮಸ್ಯೆ ಇಲ್ಲ. ಹಣವನ್ನು ತಕ್ಷಣ ರೈತರಿಗೆ ನೀಡಲಾಗುತ್ತಿದೆ. ಆದರೆ ಬೆಲೆ ಕಡಿಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.