ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕಗಳಿಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಉದ್ಯೋಗವಿಲ್ಲ ಎಂದು ಹಲವಾರು ಮಹಿಳೆಯರು ಸಮಸ್ಯೆ ಹೊತ್ತು ದೂರು ನೀಡಿದ್ದಾರೆ. ಹೀಗಾಗಿ ದುಶ್ಚಟಗಳನ್ನು ನಿಯಂತ್ರಣ ಮಾಡಬೇಕು.
– ಡಾ.ನಾಗಲಕ್ಷ್ಮೀ ಚೌಧರಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಜಿಲ್ಲೆಯಲ್ಲಿ ಇಸ್ಟಿಟ್ ಮಟ್ಕಾ ಆಡುವವರ ಮೇಲೆ ನಿಗಾ ಇಟ್ಟಿದ್ದು ಈಚೆಗೆ 36 ಜನರನ್ನು ವಶಕ್ಕೆ ಪಡೆಯಲಾಗಿದೆ. ಇಸ್ಪೀಟ್ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು.
–ಜಿ.ಸಂಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮುಗಿದ ನಂತರ ಖಾಲಿ ಜಮೀನುಗಳು ಇಸ್ಪೀಟ್ ಅಡ್ಡೆಗಳಾಗಿ ತಲೆ ಎತ್ತಿವೆ. ಕಾಲುವೆ ಜಾಲ ಇನ್ನಿತರ ಸ್ಥಳಗಳಲ್ಲಿ ಬಹಿರಂಗ ಆಟ ನಡೆಯುತ್ತಿದೆ. ಪೊಲೀಸರು ಏನು ಮಾಡುತ್ತಿದ್ದಾರೆ?
–ಯಲ್ಲಯ್ಯ ನಾಯಕ, ವನದುರ್ಗ ಬಿಜೆಪಿ ಮುಖಂಡ
ನಮ್ಮ ಊರಿನ ಜಮೀನುಗಳಲ್ಲಿ ಹಗಲು ರಾತ್ರಿ ಇಸ್ಪೀಟ್ ಆಟ ಆಡುತ್ತಿದ್ದಾರೆ. ಅವರಿಗೆ ಸಣ್ಣ ಜೋಪಡಿ ಹಾಕಿ ನೆರಳಿನ ಆಶ್ರಯ ಕಲ್ಪಿಸಲಾಗಿದೆ. ಗುಂಪು ಗುಂಪಾಗಿ ಸೇರಿ ಹಣ ಜೂಜಿಗೆ ಇಡುತ್ತಿದ್ದಾರೆ. ಪೊಲೀಸರು ಇತ್ತ ಗಮನ ಹರಿಸಲಿ