ಶಹಾಪುರ: ಗಜಲ್ ಕೇವಲ ಪ್ರೀತಿ, ಪ್ರೇಮ ವಿರಹಕ್ಕೆ ಸೀಮಿತವಾಗಿರದೆ, ಸಮಾಜದಲ್ಲಿ ಸಾಮರಸ್ಯವನ್ನು ಬೆಸೆಯುವ ಕೊಂಡಿಯಾಗಿದೆ. ಅಲ್ಲದೆ ಗಜಲ್ ಸಮಾಜದ ಒಂದು ಭಾಗವಾಗಿ ಹಾಸು ಹೊಕ್ಕಾಗಿದೆ. ಮೊನಚು ಮಾತು, ಕೆಲ ಅಕ್ಷರದಲ್ಲಿಯೇ ಬದುಕಿನ ಸಾರವನ್ನು ತಿಳಿಸುವ ಅಂಶಗಳು ಗಜಲ್ನಲ್ಲಿ ಹೆಚ್ಚಾಗಿ ಕಾಣುತ್ತೇವೆ ಎಂದು ಸಾಹಿತಿ ಮಹಿಪಾಲರಡ್ಡಿ ಮನ್ನೂರ ತಿಳಿಸಿದರು.

ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಸಾಯಿ ಮಂದಿರದಲ್ಲಿ ಭಾನುವಾರ ಕಸಾಪ ಶಹಾಪುರ ಘಟಕ ಹಾಗೂ ಬುದ್ದ, ಬಸವ, ಅಂಬೇಡ್ಕರ ಜಯಂತ್ಯುತ್ಸವ ಅಂಗವಾಗಿ ಯುವ ಬರಹಗಾರರಿಗಾಗಿ ಕಾವ್ಯ, ಕಥಾ ಕಮ್ಮಟದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ಕೃಷ್ಣ ನಾಯಕ ಮಾತನಾಡಿ, ‘ಕಾದಂಬರಿ ವಿಸ್ತೃತವಾಗಿರುತ್ತದೆ. ಕಥೆಯೊಳಗೆ ಕಥೆಯಾಗಿರುತ್ತದೆ. ಕಾದಂಬರಿಯಲ್ಲಿ ಪಾತ್ರಗಳ ಸಂಖ್ಯೆ ಹೆಚ್ಚು. ಕಾದಂಬರಿಯನ್ನು ಘಟನೆ, ಇತಿಹಾಸ, ವಾಸ್ತವ ಬದುಕಿನ ಜತೆ ಮುಖಾಮುಖಿಯಾಗಿ ಬೆಳೆಯವುದು ಹೀಗೆ ಹಲವಾರು ವಸ್ತು ವಿಷಯಗಳನ್ನು ಇಟ್ಟುಕೊಂಡು ಬರೆಯುತ್ತಾರೆ. ಕೆಲ ಕಾದಂಬರಿ ಕಾಲ್ಪನಿಕವಾಗಿರುತ್ತವೆ. ಯುವ ಸಾಹಿತಿಗಳು ನಾಡಿನ ದಿಗ್ಗಜರಾದ ಕುವೆಂಪು, ಶಿವರಾಮ ಕಾರಂತ, ದೇವನೂರ ಮಹಾದೇವ, ಎಸ್.ಎಲ್.ಭೈರಪ್ಪ, ಯಂಡಮೂರಿ ವೀರೇಂದ್ರ, ಬಸವರಾಜ ಕಟ್ಟಿಮನಿ, ಯು.ಆರ್.ಅನಂತಮೂರ್ತಿ ಮುಂತಾದ ನಾಯಕರು ಬರೆದ ಕಾದಂಬರಿಯನ್ನು ಅಧ್ಯಯನ ಮಾಡಿ’ ಎಂದು ಸಲಹೆ ಮಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಸಿ.ಎಸ್.ಭೀಮರಾಯ, ದೇವೇಂದ್ರ ಹೆಗ್ಗಡೆ,ಶಿವಣ್ಣ ಇಜೇರಿ, ಗೋವಿಂದರಾಜ, ಬಾಬುರಾವ ದೊರೆ ಮುಡಬೂಳ, ಆಲ್ದಾಳ, ಶರಣಬಸವ, ಶಕುಂತಲಾ ಹಡಗಲಿ, ದೇವಿಂದ್ರಪ್ಪ ಹಡಪದ, ಗುರುಲಿಂಗಪ್ಪ ಸಾಗರ, ಸಾಯಿಬಾಬ ಅಣಬಿ, ಮರೆಪ್ಪ ನಾಟೇಕರ್,ಆನಂದ, ಜ್ಯೋತಿ ದೇವಣಗಾಂವ, ತಿಪ್ಪಣ್ಣ ಕ್ಯಾತನಾಳ, ಸುರೇಶ ಅರುಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.