ನಾರಾಯಣಪುರ (ಯಾದಗಿರಿ ಜಿಲ್ಲೆ): ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶುಕ್ರವಾರ ಬಾಗಿನ ಅರ್ಪಿಸಿದರು.

ಪ್ರತಿ ವರ್ಷ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಜುಲೈ ಕೊನೆಯ ವಾರದಲ್ಲಿ ಭರ್ತಿಯಾಗಿದೆ.

ಬಾಗಿನ ಅರ್ಪಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ಆಲಮಟ್ಟಿ ಮಾದರಿ ಉದ್ಯಾನವನ ಇಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ನಮ್ಮ ಸರ್ಕಾರ ರೈತರ ಹಿತಕಾಪಾಡಲು ಬದ್ದವಾಗಿದೆ. ನಮ್ಮ ಸರ್ಕಾರ ನೀಡಿದ ಎಲ್ಲಾ ಭರವಸೆಗಳನ್ನು ಆದಷ್ಟು ಬೇಗನೆ ಈಡೇರಿಸಲಾಗುವುದು ಎಂದು ಹೇಳಿದರು.

ಜಲಾಶಯ 33.31 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 32.84 ಟಿಎಂಸಿ ಸಂಗ್ರಹಿಸಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ವಾದ್ಯ ಮೇಳ ಮತ್ತು ಕುಂಭಕಳಸ ಮೆರವಣಿಗೆ ಮೂಲಕ ಸಚಿವ, ಜಿಲ್ಲಾಧಿಕಾರಿಯನ್ನು ಸ್ವಾಗತಿಸಲಾಯಿತು.

ಈ ವೇಳೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ.,

ಡ್ಯಾಂ ಮುಖ್ಯ ಎಂಜಿನಿಯರ್ ಆರ್. ಮಂಜುನಾಥ, ಇಇ ಪ್ರಕಾಶ, ಎಇಇ ಪ್ರಭಾಕರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ನಾರಾಯಣಪುರ ಜಲಾಶಯದ ಮಟ್ಟ (ಆಗಸ್ಟ್ 11)

ಜಲಾಶಯ; ಗರಿಷ್ಠ ಮಟ್ಟ; ಶುಕ್ರವಾರದ ಮಟ್ಟ; ಒಳಹರಿವು (ಕ್ಯುಸೆಕ್‌ಗಳಲ್ಲಿ); ಹೊರಹರಿವು

ನಾರಾಯಣಪುರ; 492.25 ಮೀ; 492.15 ಮೀ; 15,000;6,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.