ಕೆಂಭಾವಿ: ‘ಪದವಿ ಶಿಕ್ಷಣ ಜೀವನದ ದಿಕ್ಕು ಬದಲಿಸುವ ಘಟ್ಟವಾಗಿದೆ. ಶಿಸ್ತು, ಸಂಯಮ ರೂಢಿಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ಗುರಿ ಸಾಧನೆಯತ್ತ ಗಮನ ಹರಿಸಬೇಕು’ ಎಂದು ಜಿ.ಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ ಹೇಳಿದರು.

ಪಟ್ಟಣದ ಗಂಗೂಬಾಯಿ ಶಾಂತಗೌಡ ಪೊಲೀಸ್ ಪಾಟೀಲ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ವಿವಿಧ ಸಮಿತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ವಿನಯದಿಂದ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ವಿದ್ಯಾರ್ಥಿಗಳಿಂದಾಗಬೇಕು. ಕಾಲೇಜಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಒದಗಿಸಲು ಸಚಿವರು ಬದ್ಧರಾಗಿದ್ದಾರೆ. ಕಾಲೇಜು ಮಂಡಳಿ ಸದುಪಯೋಗ ಪಡಿಸಿಕೊಂಡು ನ್ಯಾಕ್(ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ) ಗ್ರೇಡ್ ಪಡೆದುಕೊಳ್ಳುವ ಕೆಲಸ ಮಾಡಬೇಕು. ಕ್ಯಾಂಟೀನ್ ಅವಶ್ಯಕತೆಯಿದ್ದಲ್ಲಿ ಕಾಲೇಜು ಪಕ್ಕದಲ್ಲಿರುವ ತಮ್ಮ ಸ್ವಂತ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಆರಂಭಿಸಬೇಕು’ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಂಶುಪಾಲ ನಾಗಪ್ಪ ಚವಲ್ಕರ್ ಮಾತನಾಡಿ, ‘ಕಾಲೇಜಿನ ಬೆಳವಣಿಗೆ ಕುರಿತು ಹಾಗೂ ನ್ಯಾಕ್ ಅನುಷ್ಠಾನಕ್ಕೆ ಬೇಕಾಗಿರುವ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ವರ್ತಕ ಶರಣಬಸು ದಿಗ್ಗಾವಿ, ಸಾಹೇಬಲಾಲ್ ಆಂದೇಲಿ, ಪಿಯು ಕಾಲೇಜು ಪ್ರಾಂಶುಪಾಲ ವೀರೇಂದ್ರ ಧರಿ, ಪ್ರಾಧ್ಯಾಪಕ ನಸರೀನ್ ತಾಜ್, ಸಿದ್ಧಲಿಂಗ ರಾಥೋಡ, ಮಲ್ಲಿಕಾರ್ಜುನ ಮರಡ್ಡಿ, ಹಳೆ ವಿದ್ಯಾರ್ಥಿಗಳ ಪ್ರತಿನಿಧಿ ವೀರೇಶ ಭಜಂತ್ರಿ ಹಾಜರಿದ್ದರು.

ಯಂಕನಗೌಡ ಪಾಟೀಲ ನಿರೂಪಿಸಿದರು. ಮಲ್ಲಪ್ಪ ಬಿಳಿಬಾವಿ ಸ್ವಾಗತಿಸಿದರು. ಬಸಮ್ಮ ವಂದಿಸಿದರು.

ಕಲ್ಯಾಣದ ಎಲ್ಲ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳಿವೆ. ಯಾದಗಿರಿ ಜಿಲ್ಲೆಯಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗುವುದು
ಸಿದ್ದನಗೌಡ ಪೊಲೀಸ್ ಪಾಟೀಲ ಜಿ.ಪಂ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.