ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ |ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ರಲ್ಲೂ ಫಲಿತಾಂಶ ಕುಸಿತ

ಪರೀಕ್ಷೆ 1ರಲ್ಲಿ ಶೇ 54.53 ರಷ್ಟು ಫಲಿತಾಂಶ, 1,675 ವಿದ್ಯಾರ್ಥಿಗಳು ಉತ್ತೀರ್ಣ
Published 14 ಜುಲೈ 2024, 6:55 IST
Last Updated 14 ಜುಲೈ 2024, 6:55 IST
ಅಕ್ಷರ ಗಾತ್ರ

ಯಾದಗಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲೂ ಜಿಲ್ಲೆಯೂ ಫಲಿತಾಂಶ ಕುಸಿತ ಕಂಡಿದೆ. ಶೇ 23.42 ಫಲಿತಾಂಶ ಬಂದಿದೆ. ಪರೀಕ್ಷೆ–1ರಲ್ಲಿ ಶೇ 54.53 ರಷ್ಟು ಫಲಿತಾಂಶ ಬಂದಿತ್ತು.

ಜೂನ್‌ 14ರಿಂದ 22 ರವರೆಗೆ ಪರೀಕ್ಷೆ–2 ನಡೆದಿತ್ತು. ಮೊದಲ ಹಂತದ ಪರೀಕ್ಷೆ ಮಾರ್ಚ್‌–ಏಪ್ರಿಲ್‌ ತಿಂಗಳಲ್ಲಿ ನಡೆದಿತ್ತು.

ಫಲಿತಾಂಶದ ವಿವರ:

ಜಿಲ್ಲೆಯ ಪರೀಕ್ಷೆ–2ರಲ್ಲಿ ಶಹಾ‍ಪುರ ತಾಲ್ಲೂಕಿನಲ್ಲಿ 1,920 ವಿದ್ಯಾರ್ಥಿಗಳು, ಸುರಪುರ ತಾಲ್ಲೂಕಿನಲ್ಲಿ 2,666, ಯಾದಗಿರಿ ತಾಲ್ಲೂಕಿನಲ್ಲಿ 2,565 ಸೇರಿದಂತೆ 7,151 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಇದರಲ್ಲಿ ಶಹಾ‍ಪುರ ತಾಲ್ಲೂಕಿನಲ್ಲಿ 500 ವಿದ್ಯಾರ್ಥಿಗಳು, ಸುರಪುರ ತಾಲ್ಲೂಕಿನಲ್ಲಿ 629, ಯಾದಗಿರಿ ತಾಲ್ಲೂಕಿನಲ್ಲಿ 546 ವಿದ್ಯಾರ್ಥಿಗಳು 1,675 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶಹಾ‍ಪುರ ತಾಲ್ಲೂಕಿನಲ್ಲಿ 1,420, ಸುರಪುರ ತಾಲ್ಲೂಕಿನ 2,037, ಯಾದಗಿರಿ ತಾಲ್ಲೂಕಿನ 2,019 ಸೇರಿದಂತೆ 5,476 ಸಾಪಾಸಾಗಿದ್ದಾರೆ.

ಪರೀಕ್ಷೆ–1 ರ ಫಲಿತಾಂಶ:

ಶಹಾ‍ಪುರ ತಾಲ್ಲೂಕಿನಲ್ಲಿ 3,158, ಸುರಪುರ ತಾಲ್ಲೂಕಿನ 2,651, ಯಾದಗಿರಿ ತಾಲ್ಲೂಕಿನ3,455 ಸೇರಿದಂತೆ 9,264 ಪಾಸಾಗಿದ್ದಾರೆ.

2022–23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಕೊನೆ ಸ್ಥಾನ ಲಭಿಸಿತ್ತು. 35ನೇ ಸ್ಥಾನ ಗಳಿಸಿ ಶೇ 75.49 ಫಲಿತಾಂಶ ಬಂದಿತ್ತು. 2021–2022ನೇ ಸಾಲಿನಲ್ಲಿ ಶೇ 78.69 ಫಲಿತಾಂಶ ಬಂದಿತ್ತು. 2020–21ರಲ್ಲಿ ಶೇ 3.02 ರಷ್ಟು ಫಲಿತಾಂಶ ಕುಸಿತವಾಗಿದೆ. ಕಳೆದ ಎರಡು ವರ್ಷವೂ ಬಿ ಗ್ರೆಡ್‌ನಲ್ಲಿತ್ತು.

ಯಾದಗಿರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲಿ ಶೇ 23.42ರಷ್ಟು ಫಲಿತಾಂಶ ಬಂದಿದೆ. 7151 ವಿದ್ಯಾರ್ಥಿಗಳಲ್ಲಿ 1675 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ
ಎಚ್‌.ಟಿ.ಮಂಜುನಾಥ ಡಿಡಿಪಿಐ
ಮಂಜುನಾಥ, ಡಿಡಿಪಿಐ
ಮಂಜುನಾಥ, ಡಿಡಿಪಿಐ

ಫಲಿತಾಂಶದ ವಿವರ ತಾಲ್ಲೂಕು; ಶೇಕಡವಾರು ಶಹಾಪುರ;26.04 ಸುರಪುರ;23.59 ಯಾದಗಿರಿ;21.29 ಒಟ್ಟು;23.42

ಮೂರು ಬಾರಿ ಪರೀಕ್ಷೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯುತ್ತಿದೆ. ಮಾರ್ಚ್‌–ಏಪ್ರಿಲ್‌ ತಿಂಗಳಲ್ಲಿ ಮೊದಲ ಹಂತ ಜೂನ್‌ ತಿಂಗಳಲ್ಲಿ ಎರಡನೇ ಹಂತ ಆಗಸ್ಟ್‌ 2ರಿಂದ 9ರ ವರೆಗೆ ಮೂರನೇ ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಎರಡು ಬಾರಿಯೂ ಪರೀಕ್ಷೆ ಬರೆದರೂ ಉತ್ತೀರ್ಣರಾಗದ ವಿದ್ಯಾರ್ಥಿನಿಯರಿಗೆ ಶಾಲೆ ಬಿಡಿಸುವ ಬಗ್ಗೆ ಪೋಷಕರು ಆಲೋಚಿಸುತ್ತಿದ್ದಾರೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT