ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಲಾಪುರದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ

Published : 23 ಸೆಪ್ಟೆಂಬರ್ 2024, 14:36 IST
Last Updated : 23 ಸೆಪ್ಟೆಂಬರ್ 2024, 14:36 IST
ಫಾಲೋ ಮಾಡಿ
Comments

ಯಾದಗಿರಿ: ನಮ್ಮ ಸುತ್ತಮುತ್ತಲೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸ್ವಚ್ಛತೆ ಅಗತ್ಯ. ಗ್ರಾಮೀಣ ನೈರ್ಮಲ್ಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಪಿಡಿಒ ಕೆ.ಪ್ರಭು ಗೂಡೂರು ಮನವಿ ಮಾಡಿದರು.

ತಾಲ್ಲೂಕಿನ ಅರಕೇರಾ.ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಕ್ಷೇತ್ರ ಮೈಲಾಪುರದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮೀಣ ಭಾರತದಲ್ಲಿ ಸಂಪೂರ್ಣ ನೈರ್ಮಲ್ಯದ ಕಡೆಗೆ ಪ್ರಯತ್ನಗಳನ್ನು ವೇಗಗೊಳಿಸುವ ಗುರಿ ಹೊಂದಲಾಗಿದೆ. ಇದು ಪಾರಂಪರಿಕ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಮತ್ತು ಗ್ರಾಮ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಬೃಹತ್ ಸಮುದಾಯ ಸಜ್ಜುಗೊಳಿಸುವ ಅಭಿಯಾನವಾಗಿದೆ ಎಂದರು.

ಬಯಲು ಶೌಚ ಮುಕ್ತ ಗ್ರಾಮಗಳನ್ನು ಸಾಧಿಸಲು ಸಮುದಾಯದ ಸಹಭಾಗಿತ್ವ ಮತ್ತು ಜನ ಆಂದೋಲನದ ಅಗತ್ಯವಿದೆ. ನೈರ್ಮಲ್ಯವು ಪ್ರತಿಯೊಬ್ಬರ ವ್ಯವಹಾರವಾಗಿದೆ. ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಗ್ರಾ.ಪಂ. ಸದಸ್ಯರಾದ ಮಲ್ಲಯ್ಯ, ಕಂದಾಯ ಅಧಿಕಾರಿ ಸುರೇಂದ್ರರೆಡ್ಡಿ ಸೇರಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT