ಯಾದಗಿರಿ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಭೂಸ್ವಾಧೀನ ಪ್ರಕ್ರಿಯೆ, ಪೈಪ್ಲೈನ್ ಕಾಮಗಾರಿ ಹಾಗೂ ವಿದ್ಯುತ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೆರೆಗಳು ತುಂಬುವ ಯೋಜನೆ ಬಹಳ ಮಹತ್ವದ್ದಾಗಿದೆ. ಇಲ್ಲಿನ ರೈತರು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಈ ಪ್ರದೇಶ ಮಳೆಯ ಅಭಾವ ಹೊರತಾಗಿಯೂ ಬಹಳ ಫಲವತ್ತಾದ ಭೂಮಿ ಹೊಂದಿದೆ. ಈ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿದರೆ ರೈತರಿಗೆ ಸಹಕಾರಿಯಾಗುತ್ತದೆ ಎಂದರು.

ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

35 ಕೆರೆಗಳಲ್ಲಿ ಯಾದಗಿರಿ ತಾಲ್ಲೂಕಿನ 9 ಕೆರೆಗಳಾದ ಲಿಂಗೇರಿ, ಹಳಗೇರಾ, ನಗಲಾಪುರ, ಕಿಲ್ಲನಕೇರಾ, ರಾಮಸಮುದ್ರ, ನೀಲಹಳ್ಳಿ, ಕಡೇಚೂರು, ದುಪ್ಪಲ್ಲಿ, ಸೌರಾಷ್ಟ್ರಹಳ್ಳಿ, ಗುರುಮಠಕಲ್ ತಾಲ್ಲೂಕಿನಲ್ಲಿ 22 ಕೆರೆಗಳಾದ ಪಸ್ಪೂಲ್, ಯಂಪಾಡ್, ಯದಲಾಪುರ, ಕಾಕಲವಾರ 2, ಗುರುಮಠಕಲ್, ಚಂಡ್ರಕಿ, ಧರ್ಮಾಪುರ, ಚಿಂತನಹಳ್ಳಿ, ಅನಪುರ, ನಸಲವಾಲ, ಗುಂಜನೂರು, ಕರಣಿಗಿ, ಜೈಗ್ರಾಂ, ತೋರಣತಿಪ್ಪ, ಯಲಸತ್ತಿ, ಮಾದ್ವಾರ, ಕಾಳೆಬೆಳಗುಂದಿ, ಕಣೇಕಲ್, ಸಣ್ಣಸಂಬರ, ಗುಡ್ಲಾಗುಂಟಾ, ಗೋಪಾಲಪುರ, ಸೇಡಂ ಭಾಗದ 4 ಕೆರೆಗಳಾದ ಮೋತಕಪಲ್ಲಿ, ಬುರಗಪಲ್ಲಿ, ತುಳಮಮಡ್ಡಿ, ಇಟ್ಕಲ್ ಎಲ್ಲಾ ಗ್ರಾಮಗಳ ಕೆರೆ ತುಂಬುವ ಕಾಮಗಾರಿಗಳು ಶೇ 90 ರಷ್ಟು ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಲಕ್ಷ್ಮಣ ನಾಯಕ, ಕಾರ್ಯನಿರ್ವಾಹಕ ಎಂಜಿನಿಯರ್ ವಿಠ್ಠಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.