ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ಬಂಡೆ ಸಾವು: ವಿವಿಧೆಡೆ ಶ್ರದ್ಧಾಂಜಲಿ

ವಿವಿಧೆಡೆ ಪ್ರತಿಭಟನೆ, ಐಜಿಪಿ ರಾಜೀನಾಮೆಗೆ ಆಗ್ರಹ
Published : 16 ಜನವರಿ 2014, 6:35 IST
ಫಾಲೋ ಮಾಡಿ
Comments

ಯಾದಗಿರಿ: ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ನಿಧನರಾದ ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುರ್ನ ಬಂಡೆ ಅವರಿಗೆ ನಗರದ ಸ್ಟೇಷನ್ ರಸ್ತೆಯಲ್ಲಿ ಬುಧವಾರ ಶ್ರೀರಾಮಸೇನೆ ಹಾಗೂ ಬಂಡೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ನಗರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವೈ.ಎನ್.­ಗುಂಡುರಾವ್ ಮಾತನಾಡಿ, ದಕ್ಷ, ಪ್ರಾಮಾಣಿಕ, ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ನಮ್ಮೆಲ್ಲರಿಗೆ ಪ್ರೇರಣೆ. ಅವರು ಸಾವು ನಾಡಿಗೆ ದುಃಖವನ್ನು ಉಂಟು ಮಾಡಿದೆ ಎಂದರು.

ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪಾಟೀಲ, ಅಭಿಮಾನಿ ರೋಹಿತ್ ವೈದ್ಯ ಮಾತನಾಡಿದರು. ಸಿದ್ದಣಗೌಡ ಪಾಟೀಲ, ರಘು ಚವ್ಹಾಣ, ದೇವು ಕಲಾಲ್, ಜಿತೇಂದ್ರ ನವಗಿರಿ, ಆನಂದ ಸ್ವಾಮಿ, ಲಿಂಗರಾಜ ಸಾತನೂರ, ಕಿರಣ ಬಾಡದ, ಮಹೇಶ, ಎಚ್,ಆರ್,ಶಿವಮೂರ್ತಿ, ರಾಜೇಶ ಸೇರಿದಂತೆ ಇನ್ನಿತರರಿದ್ದರು.

ಕರವೇ ಪ್ರತಿಭಟನೆ: ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ ಸಾವಿಗೆ ಸರ್ಕಾರದ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ನಗರದ ಬಸ್ ನಿಲ್ದಾಣದ ಎದುರು ಬುಧವಾರ ರಸ್ತೆ ತಡೆ ನಡೆಸಿ, ಸರ್ಕಾರದ ಪ್ರತಿಕೃತಿ ದಹಿಸಿದರು.
ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ, ತಾಲ್ಲೂಕು ಘಟಕದ ಅಧ್ಯಕ್ಷರಾದ ದೇವು ಪಾಟೀಲ, ಅಧ್ಯಕ್ಷ ವೆಂಕಟೇಶ ಬೋನೇರ್, ರವಿ ತಳಬಿಡಿ, ಸೀನು ಖಾನಾಪುರ, ಕಾಸೀಂ ಪಟೇಲ್, ಗೌಡಪ್ಪ, ರಡ್ಡಿ ಸೇರಿದಂತೆ ಇನ್ನಿತರರಿದ್ದರು.

ಪರಿಹಾರಕ್ಕೆ ಆಗ್ರಹ: ಹುತಾತ್ಮರಾದ ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ರೂ15 ಲಕ್ಷ ಪರಿಹಾರ ಘೋಷಣೆ­ಯನ್ನು ಮಾಡಿದ ರಾಜ್ಯ ಸರ್ಕಾರ ಕ್ರಮ ಖಂಡನೀಯ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಹೇಳಿದ್ದಾರೆ.
ಪೊಲೀಸರು ದೇಶ ದ್ರೋಹಿಗಳನ್ನು ಬಂಧಿಸುವ ಸಮಯದಲ್ಲಿ ಜೀವವನ್ನು ಕಳೆದು­ಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಪೊಲೀಸರ ಕುಟುಂಬಕ್ಕೆ ನೈತಿಕ ಬಲ ಬರಬೇಕಾದರೆ, ಅವರಿಗೆ ಘೋಷಣೆ ಮಾಡುವ ಪರಿಹಾರ ಧನ ಕನಿಷ್ಟ­ ₨1 ಕೋಟಿ ಇರಬೇಕು. ರಾಜ್ಯ ಸರ್ಕಾರ ವೀರಮರಣ ಹೊಂದಿದ ಪೊಲೀಸ್‌ ಅಧಿಕಾರಿಗಳ ಕುಟುಂಬಕ್ಕೆ ರೂ1 ಕೋಟಿ ಪರಿಹಾರ ಧನ ಕೊಡುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಗಣ್ಯರ ಸಂತಾಪ: ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ ಅವರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವರಾಜ ನಾಯಕ, ಹನುಮೇಗೌಡ ಮರಕಲ್‌, ಬಸವರಾಜ ಖಂಡ್ರೆ, ಪಾರ್ವತಮ್ಮ ಕಾಡಂನೋರ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಣ್ಣ ಇಟಗಿ, ವಡಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಶಮ್ಮ ಪಿಡ್ಡೆಗೌಡರ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ನೀಲಹಳ್ಳಿ, ಯಂಕಣ್ಣ ಬಸಂತಪುರ, ಮಲ್ಲಯ್ಯ ಮುಸ್ತಾಜೀರ, ಎಪಿಎಂಸಿ ಸದಸ್ಯ ದೇವಪ್ಪ ಕಡೇಚೂರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ, ಕೆಎಂಸಿ ಅಧ್ಯಕ್ಷ ಶೇಖಚಾಂದ, ಉಪಾಧ್ಯಕ್ಷ ಉಸ್ಮಾನಬಾಷಾ ತಡಬಿಡಿ, ಜಾಮೀಯಾ ಮಸೀದಿ ಮುಖ್ಯಸ್ಥ ಮೈನೋದ್ದಿನ್ ದೇವದುರ್ಗ, ವಡಗೇರಾ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ ನಾಯಕ, ತಿರುಕಯ್ಯ ಬುಸ್ಸೆನ, ಅಲೆಮಾರಿ ಬುಡಕಟ್ಟು ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣು ಕೊಂಕಲ್, ತಾಲ್ಲೂಕಿನ ಹತ್ತಿಕುಣಿ ಗ್ರಾಮದ ರವಿಗೌಡ ಮಾಲಿಪಾಟೀಲ ಹತ್ತಿಕುಣಿ, ಸಿದ್ದು ನಾಯಕ ಹತ್ತಿಕುಣಿ, ಹರೀಶ, ದೇವಿಂದ್ರಪ್ಪ, ಸಾಬಣ್ಣ ಶೇಲೆರಿ, ಸುಭಾಷ ನಾಯಕ, ಯಂಕರೆಡ್ಡಿ ಕೌಳೂರ ಸಂತಾಪ ಸೂಚಿಸಿದ್ದಾರೆ.

ಹುಣಸಗಿ ವರದಿ
ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ ಅವರ ನಿಧನಕ್ಕೆ ಮಾಜಿ ಸಚಿವ ನರಸಿಂಹನಾಯಕ ಶೋಕ ವ್ಯಕ್ತಪಡಿಸಿದ್ದಾರೆ.
ಹುಣಸಗಿ ಕಸಾಪ ಅಧ್ಯಕ್ಷ ವೀರೇಶ ಹಳ್ಳೂರ, ವಿಶ್ವಚೇತನ ಗೆಳೆಯ ಬಳಗದ ಅಧ್ಯಕ್ಷ ಶಿವಕುಮಾರ ಬಂಡೋಳಿ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಸಂಗನಗೌಡ ಧನರಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಸಿ.ಪಾಟೀಲ, ನಾಗಣ್ಣ ದಂಡಿನ್, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ­ಗೌಡ ವಜ್ಜಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ನೀರಲಗಿ, ಆರ್.ಎಂ.ರೇವಡಿ ಸೇರಿದಂತೆ ಇತರರು ಶೋಕ ವ್ಯಕ್ತಪಡಿಸಿದ್ದಾರೆ.

ಸುರಪುರ ವರದಿ
ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ನಿಧನಕ್ಕೆ ಜಿಲ್ಲಾ ವೀರಶೈವ ಯುವ ವೇದಿಕೆ ಹಾಗೂ ಕನ್ನಡ ಸೇನೆ ಜಂಟಿಯಾಗಿ ಬುಧವಾರ ಗಾಂಧಿ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು.

ನೇತೃತ್ವ ವಹಿಸಿದ್ದ ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ, ಮಲ್ಲಿಕಾರ್ಜುನ ಬಂಡೆಯವರ ನಿಧನಕ್ಕೆ ಸರ್ಕಾರದ ನಿರ್ಲಕ್ಷವೇ ಕಾರಣ. ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಖಮರುಲ್ ಇಸ್ಲಾಂ ಮತ್ತು ಐಜಿಪಿ ವಜೀರ್ ರಾಜೀನಾಮೆ ನೀಡಬೇಕು. ಬಂಡೆ ಕುಂಟುಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕುಟುಂಬ ವರ್ಗಕ್ಕೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮತ್ತು ನ್ಯಾಯವಾದಿ ಜಿ.ಎಸ್.­ಪಾಟೀಲ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜೂ ಕುಂಬಾರ ಮಾತನಾಡಿದರು.

ಸಿದ್ರಾಮಪ್ಪ ಪಾಟೀಲ್, ಮಹೇಶ ವಾಲಿ, ಚನ್ನಬಸಪ್ಪ ವಾಲಿ, ಗೌರಿಶಂಕರ ಎತ್ತಿನಮನಿ, ಸೋಮಶೇಖರ ಶಾಬಾದಿ, ಶರಣ­ಗೌಡ ಮುನಮುಟಗಿ, ಚಂದ್ರಶೇಖರ ಲಕ್ಷ್ಮೀಪುರ, ಸಿದ್ದನ­ಗೌಡ ಹೆಬ್ಬಾಳ, ವೆಂಕಟೇಶ ನಾಯಕ, ಸಂತೋಷ ಎತ್ತನಿಮನಿ, ಶರಣು ಜಾಲಹಳ್ಳಿ, ರಾಜು ಬಾರಿ, ಬುರಾನ್ ಅಲಿ, ಸಿದ್ದಣ್ಣ ಮುಧೋಳ, ಮಂಜು­ನಾಥ ತಳ್ಳಳ್ಳಿ, ದಿನೇಶ ದಾದ, ಸತೀಶ ಕೊಳ್ಳಿ, ಶರಣಯ್ಯ ಸ್ವಾಮಿ, ಭೀಮು ಕಳ್ಳಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT