ವಿಜಯಪುರ: ‘ಸಚಿವ ಡಿ.ಕೆ.ಶಿವಕು ಮಾರ ತಮ್ಮ ವಿರುದ್ಧ ದಾಖಲಾಗಿರುವ ಐಟಿ, ಇಡಿ ಪ್ರಕರಣಗಳನ್ನು ರದ್ದು ಪಡಿ ಸಲು ಕೇಂದ್ರ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹತ್ತಿರ ಲಾಬಿ ಮಾಡುತ್ತಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

‘ಇದಕ್ಕಾಗಿ ಅವರು ಬೇರೆಯವರ ಕಡೆ ಯಿಂದ ಒತ್ತಡ ಹಾಕಿಸುತ್ತಿದ್ದಾರೆ. ಪ್ರತಿ ಯಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ವಿರೋಧಿಸುವುದಿಲ್ಲ ಎಂದು ಡಿಕೆಶಿ ಭರವಸೆ ನೀಡುತ್ತಿದ್ದಾರೆ. ಅವರಿಗೆ ಬಿಜೆಪಿಗೆ ಬರುವಂತೆ ಯಾರೂ ಕರೆದಿಲ್ಲ’ ಎಂದು ಹೇಳಿದರು.

ಮಗನ ಅಧಿಕಾರ ಉಳಿಸಲು ಪಾದಯಾತ್ರೆ: ‘ಮಂಡ್ಯ ಜಿಲ್ಲೆಗೆ ₹8 ಸಾವಿರ ಕೋಟಿ ಅನುದಾನ ನೀಡಿ, ಉತ್ತರ ಕರ್ನಾಟಕಕ್ಕೆ ₹800 ಕೋಟಿಯೂ ನೀಡದಿರುವುದಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರುಪಾದಯಾತ್ರೆ ಮಾಡುತ್ತಿದ್ದಾರಾ? ಇಲ್ಲ. ತಮ್ಮ ಮಗನ ಅಧಿಕಾರ ಉಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಾರೆ. ಪಾದಯಾತ್ರೆಗೂ ಮೊದಲು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನೀಡಿರುವ ಅನುದಾನದ ಬಗ್ಗೆ ಅಂಕಿ–ಅಂಶ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಬರೀ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮೀಣ, ತುಮಕೂರು ಉದ್ಧಾರವಾದರೆ ಸಾಕು. ಜೆಡಿಎಸ್ 30–40 ಸೀಟು ಗೆಲ್ಲಬೇಕು, ಯಾವುದೇ ಸರ್ಕಾರ ಬಂದರೂ ತಮ್ಮ ಬೆಂಬಲದೊಂದಿಗೆ ಮಗ ಮುಖ್ಯಮಂತ್ರಿ ಆಗಬೇಕು ಎಂಬುದೊಂದೇ ದೇವೇಗೌಡರ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.