ಬೆಂಗಳೂರು: ಲಘು ಬಳಕೆಯ ಹೆಲಿಕಾಪ್ಟರ್ (ಎಲ್ಯುಎಚ್) ಆರು ಕಿ.ಮೀ ಎತ್ತರಕ್ಕೆ ಹಾರಿ ವಿವಿಧ ಕಸರತ್ತುಗಳನ್ನು ನಡೆಸುವ ಮೂಲಕ ಮೈಲಿಗಲ್ಲು ಸೃಷ್ಟಿಸಿದೆ.

ಮುಖ್ಯ ಪರೀಕ್ಷಾ ಪೈಲಟ್ಗಳಾದ ಉನ್ನಿ ಕೆ ಪಿಳ್ಳೈ ಮತ್ತು ಅನಿಲ್ ಬಂಭಾನಿ ಅವರು ಇತ್ತೀಚೆಗೆ ನಗರದಲ್ಲಿ ಹೆಲಿಕಾಪ್ಟರ್ ಅನ್ನು ಆರು ಕಿ.ಮೀಗಳಷ್ಟು ಎತ್ತರಕ್ಕೆ ಹಾರಾಟ ನಡೆಸಿದರು. ಈ ಹೆಲಿಕಾಪ್ಟರ್ಗೆ ಪ್ರಮಾಣ ಪತ್ರ ಪಡೆಯಲು ಈ ಪರೀಕ್ಷೆ ಅಗತ್ಯವಾಗಿತ್ತು. ಎತ್ತರದಲ್ಲಿ ತೃಪ್ತಿಕರ ಪ್ರದರ್ಶನ ನೀಡಿತು. 2019 ರ ಜನವರಿಯಲ್ಲಿ ಅತಿ ಎತ್ತರದ ಶೀತ ಹವೆಯಲ್ಲಿ ಹಾರಾಟದ ಪರೀಕ್ಷೆ ನಡೆಸುವ ಯೋಜನೆ ಇದೆ ಎಂದು ಎಚ್ಎಎಲ್ ತಿಳಿಸಿದೆ.

ಎಲ್ಯುಎಚ್ ಹೆಲಿಕಾಪ್ಟರ್ ಮೂರು ಟನ್ ವರ್ಗದ ಹೊಸ ತಲೆಮಾರಿನ ಹೆಲಿಕಾಪ್ಟರ್ ಆಗಿದ್ದು, ಇದರ ವಿನ್ಯಾಸ ಮತ್ತು ನಿರ್ಮಾಣವನ್ನು ಎಚ್ಎಎಲ್ನ ರೋಟರಿ ವಿಂಗ್ ರೀಸರ್ಚ್ ಅಂಡ್ ಡಿಸೈನ್ ಕೇಂದ್ರ ಮಾಡಿದೆ. ಎಚ್ಎಎಲ್ ಈಗಾಗಲೇ ಬಹಳ ಹಳೆಯದಾಗಿರುವ ಚೀತಾ ಮತ್ತು ಚೇತಕ್ಗೆ ಬದಲಿಗೆ ಇದನ್ನು ಬಳಸಲು ಭಾರತೀಯ ಸೇನಾ ಪಡೆಗಳು ಉತ್ಸುಕವಾಗಿವೆ. ಎಚ್ಎಎಲ್ಗೆ 187 ಎಲ್ಯುಎಚ್ ಆರ್ಡರ್ ಸಿಕ್ಕಿದೆ. ಇದರಲ್ಲಿ ಭೂಸೇನೆ 126 ಮತ್ತು ವಾಯು ಪಡೆಗೆ 61 ಹೆಲಿಕಾಪ್ಟರ್ಗಳು ಸೇರಿವೆ ಎಂದು ಎಚ್ಎಎಲ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.