ನವದೆಹಲಿ: ಪಶ್ಚಿಮ ರೈಲ್ವೆಯಲ್ಲಿ 3624 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 26 ಅರ್ಜಿ ಸಲ್ಲಿಸಲು ಕೊನೆಯ ದಿನ.

ಈ ಕುರಿತಂತೆ ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ) ಅಧಿಸೂಚನೆ ಪ್ರಕಟಿಸಿದೆ. ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಎಸ್‌ಎಸ್‌ಎಲ್‌ಸಿ ಹಗೂ ಐಟಿಐ ಅಂಕ ಆಧರಿಸಿ ನೇಮಕಾತಿ ನಡೆಯಲಿದೆ. ವೃತ್ತಿ ಸ್ಥಳ ಮುಂಬೈ ಆಗಿರಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಈ ನೇಮಕಾತಿಯಲ್ಲಿ 938 ಫಿಟ್ಟರ್, 296 ವೆಲ್ಡರ್, 221 ಕಾರ್ಪೆಂಟರ್, 213 ಪೇಂಟರ್, 209 ಡೀಸೆಲ್ ಮೆಕ್ಯಾನಿಕ್, 15 ಮೋಟಾರ್ ವಾಹನ ಮೆಕ್ಯಾನಿಕ್, 112 ಎಲೆಕ್ಟ್ರಾನಿಕ್ ಮೆಕ್ಯಾನಿಕ್, 14 ವೈರ್‌ಮನ್, 639 ಎಲೆಕ್ಟ್ರೀಷಿಯನ್, 257 ಪ್ರೋಗ್ರಾಮಿಂಗ್ ಹಾಗೂ ಸಿಸ್ಟಮ್ ಅಡ್ಮಿನ್, 147 ರೆಫ್ರಿಜರೇಟರ್ ಎಸಿ ಮೆಕ್ಯಾನಿಕ್, 186 ಪೈಪ್ ಫಿಟ್ಟರ್, 141 ಪ್ಲಂಬರ್, 88 ಡ್ರಾಫ್ಟ್ಸ್‌ಮನ್, 26 ಮಷಿನಿಸ್ಟ್, 33 ಟರ್ನರ್, 26 ಮೆಕ್ಯಾನಿಕ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಅಭ್ಯರ್ಥಿಗಳು 2023ರ ಜುಲೈ 26ಕ್ಕೆ ಕನಿಷ್ಠ 15 ಗರಿಷ್ಠ 24 ವರ್ಷದವರಾಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 5 ವರ್ಷ ರಿಯಾಯಿತಿ ಇದೆ.

ಆನ್‌ಲೈನ್ ಅಪ್ಲಿಕೇಷನ್ ಸಲ್ಲಿಸಲು : www.rrc-wr.com ಕ್ಲಿಕ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.