ಹುಬ್ಬಳ್ಳಿ: ಇಲ್ಲಿನ ಕೃಪಾ ಜೈನ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ 18ನೇ ರ‍್ಯಾಂಕ್ ಪಡೆದಿದ್ದಾರೆ.

ಕಳೆದ ತಿಂಗಳು ಪ್ರಕಟಗೊಂಡ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಅವರು 440ನೇ ರ‍್ಯಾಂಕ್ ಗಳಿಸಿದ್ದರು.

ಇಂದಿರಾ ಮತ್ತು ಉದ್ಯಮಿ ಅಭಯ್ ಪಾರ್ಲೆಚಾ ದಂಪತಿ ಪುತ್ರಿ ಕೃಪಾ, ದ್ವಿತೀಯ ಪಿಯುವರೆಗೆ ಹುಬ್ಬಳ್ಳಿಯಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ ಪದವಿ ಪೂರೈಸಿದ್ದಾರೆ. ಬಿ.ಇ. ಓದುವಾಗ ನಾಗರಿಕ ಸೇವೆ ಕಡೆಗೆ ಆಸಕ್ತಿ ಬೆಳೆಸಿಕೊಂಡ ಅವರು, ದೆಹಲಿಗೆ ತೆರಳಿ ತಜ್ಞರ ಸಲಹೆ ಪಡೆದು ಸ್ವಯಂ ಅಧ್ಯಯನ ಮಾಡಿದರು.

‘ಯುಪಿಎಸ್‌ಸಿ ಮತ್ತು ಐಎಫ್‌ಎಸ್ ಎರಡರಲ್ಲೂ ಒಳ್ಳೆಯ ರ‍್ಯಾಂಕ್ ಬಂದಿದ್ದು ಖುಷಿ ತಂದಿದೆ. ಆದರೆ ಯಾವ ಸೇವೆಗೆ ಸೇರಬೇಕೆಂದು ನಿರ್ಧರಿಸಿಲ್ಲ. ಯುಪಿಎಸ್‌ಸಿಯಲ್ಲಿ ಯಾವ ಹುದ್ದೆ ಸಿಗುವುದೆಂದು ನೋಡಿ ನಿರ್ಧರಿಸುವೆ. ಕರ್ನಾಟಕದಲ್ಲೇ ಪೋಸ್ಟಿಂಗ್ ಸಿಗುತ್ತದೆ ಎಂದಾದರೆ ಫಾರೆಸ್ಟ್ ಸರ್ವೀಸ್ ಆಯ್ಕೆ ಮಾಡಿಕೊಳ್ಳುವೆ’ ಎಂದು ಕೃಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.