ನಾಗರಿಕ ವಿಮಾನಯಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದ ದಕ್ಷಿಣ ಪ್ರಾಂತ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯದ ಅಭ್ಯರ್ಥಿಗಳಿಂದ ಮಾತ್ರ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಡಿಸೆಂಬರ್ 27ರಿಂದ ಒಟ್ಟು ವಿವಿಧ 119 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು, ಜನವರಿ 26ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಶುಲ್ಕ ₹1000.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಲಕ್ಷದ್ವೀಪದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಜೂನಿಯರ್ ಅಸಿಸ್ಟೆಂಟ್: ಫೈರ್ ಸರ್ವಿಸ್– 73 ಹುದ್ದೆಗಳು
‘ಜೂನಿಯರ್ ಅಸಿಸ್ಟೆಂಟ್– ಫೈರ್ ಸರ್ವಿಸ್’ ಎಂಬ ಒಟ್ಟು 73 ಹುದ್ದೆಗಳಿದ್ದು ಪಿಯುಸಿ ಅಥವಾ ಡಿಪ್ಲೊಮಾ ಮೆಕ್ಯಾನಿಕಲ್/ಡಿಪ್ಲೊಮಾ ಆಟೊಮೊಬೈಲ್ ಅರ್ಹತೆ ಹೊಂದಿರಬೇಕು. ಜೊತೆಗೆ ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿವೃತ್ತ ಸೈನಿಕರಿಗೆ ಮಾತ್ರ ಅವಕಾಶವಿದೆ. ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ದೈಹಿಕ ಅರ್ಹತಾ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇರಲಿದೆ. ವೇತನ:92,000 ವರಗೆ. ವಯೋಮಿತಿ: ನಿವೃತ್ತ ಸೈನಿಕರಿಗೆ ನಿಯಮಾವಳಿ ಅನುಸಾರ ಅನ್ವಯವಾಗಲಿವೆ.

ಜೂನಿಯರ್ ಅಸಿಸ್ಟೆಂಟ್ (ಆಫೀಸ್)– 2 ಹುದ್ದೆಗಳು:

ಜೂನಿಯರ್ ಅಸಿಸ್ಟೆಂಟ್ ಎಂಬ ಎರಡು ಹುದ್ದೆಗಳಿದ್ದು, ಯಾವುದೇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ₹92,000 ವರೆಗೆ ವೇತನವಿದೆ. ವಯೋಮಿತಿ ಕನಿಷ್ಠ 18 ಗರಿಷ್ಠ 30. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಸಿಬಿಟಿ ಪರೀಕ್ಷೆ ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಇರಲಿದೆ.

ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)– 25 ಹುದ್ದೆಗಳು:

ಸೀನಿಯರ್ ಅಸಿಸ್ಟೆಂಟ್ ಎಂಬ 25 ಹುದ್ದೆಗಳಿದ್ದು ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಷನ್/ರೇಡಿಯೊ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. ಜೊತೆಗೆ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಮುಗಿಸಿ ಎರಡು ವರ್ಷದ ಸೇವಾನುಭವ ಹೊಂದಿರುವುದು ಅವಶ್ಯಕ. ವಯೋಮಿತಿ ಕನಿಷ್ಠ 18 ಗರಿಷ್ಠ 30. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಸಿಬಿಟಿ ಪರೀಕ್ಷೆ ಮಾತ್ರ ಇರಲಿದೆ. ವೇತನ ₹1,10,000ವರೆಗೆ.

ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್)– 19 ಹುದ್ದೆಗಳು:

ಸೀನಿಯರ್ ಅಸಿಸ್ಟೆಂಟ್ ಎಂಬ 19 ಹುದ್ದೆಗಳಿದ್ದು, ಯಾವುದೇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆದರೆ, ಬಿ.ಕಾಂ ಪದವಿ ಹೊಂದಿರುವವರಿಗೆ ಆದ್ಯತೆ. ಜೊತೆಗೆ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಮುಗಿಸಿ ಎರಡು ವರ್ಷದ ಸೇವಾನುಭವ ಹೊಂದಿರುವುದು ಅವಶ್ಯಕ ₹ 1,10,000 ವರೆಗೆ ವೇತನವಿದೆ. ವಯೋಮಿತಿ ಕನಿಷ್ಠ 18 ಗರಿಷ್ಠ 30. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಸಿಬಿಟಿ ಪರೀಕ್ಷೆ ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಇರಲಿದೆ.

ಇಂಗ್ಲಿಷ್ ತಿಳಿವಳಿಕೆ ಅಗತ್ಯ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಂಗ್ಲಿಷ್ ಭಾಷೆಯನ್ನು ಬರೆಯಲು, ಓದಲು ಬರಬೇಕು. ದೈಹಿಕ ಪರೀಕ್ಷೆಯ ವಿವರಗಳು, ಪಠ್ಯಕ್ರಮ, ಇತರೆ ಹೆಚ್ಚಿನ ಮಾಹಿತಿಗಳಿಗೆ ಆಸಕ್ತರು ಭಾರತೀಯ ವಿಮಾನ ನಿಲ್ದಾಣಗಳ ಅಭಿವೃದ್ದಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ www.aai.aero ನಲ್ಲಿ ನೋಟಿಫಿಕೇಶನ್ ಪರಿಶೀಲಿಸಬಹುದು.

AAI ಬಗ್ಗೆ: ಭಾರತೀಯ ವಿಮಾನ ನಿಲ್ದಾಣಗಳ ಅಭಿವೃದ್ದಿ ಪ್ರಾಧಿಕಾರ 1995 ರಲ್ಲಿ ರಚನೆಯಾಗಿದ್ದು ದೇಶದಲ್ಲಿನ ವಿಮಾನ ನಿಲ್ದಾಣಗಳ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೊಣೆಗಾರಿಕೆ, ನವೀಕರಣ ಹಾಗೂ ನಿರ್ವಹಣೆ ಕೆಲಸಗಳನ್ನು ನೋಡಿಕೊಳ್ಳುತ್ತದೆ. ಒಟ್ಟು ಐದು ವಲಯಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.